More

    ಬಿಜೆಪಿಯಿಂದ ಯಾರೂ ಕಾಂಗ್ರೆಸ್​ ಸೇರಲ್ಲ; ಪಕ್ಷ ಬಲಪಡಿಸುವ ಆಸೆಯಲ್ಲಿ ಡಿಕೆಶಿ ಹೀಗೆ ಹೇಳ್ತಿದ್ದಾರೆ: ಕೋಟ ಶ್ರೀನಿವಾಸ್​ ಪೂಜಾರಿ

    ಬೆಂಗಳೂರು: ಬಿಜೆಪಿ ನಾಯಕರು ಪಕ್ಷ ತ್ಯಜಿಸಿ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂಬ ಹೇಳಿಕೆಗಳು ಹೊರಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ, ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಈ ಸರ್ಕಾರಕ್ಕೆ ಯಾವುದೇ ಆಪರೇಷನ್​ ಬೇಕಿಲ್ಲ, ನ್ಯಾಚುರಲ್​ ಡೆಲಿವರಿ ಆಗಲಿದೆ ಕಾಯಿರಿ: ಬಸನ್​ಗೌಡ ಪಾಟೀಲ್​ ಯತ್ನಾಳ್​

    ಇಂದು ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವ, “ಲೋಕಸಭಾ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಈ ಕಾರಣಕ್ಕೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಮತ್ತು ಹೋರಾಟ ಮಾಡುತ್ತಿದೆ. ಜೆಡಿಎಸ್ ಮೈತ್ರಿ ವಿಚಾರವನ್ನು ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ. ಅದು ನಮ್ಮ ವ್ಯಾಪ್ತಿಯಲ್ಲಿಲ್ಲ” ಎಂದು ಹೇಳಿದರು.

    “ದೇವೇಗೌಡರು ಕೇಂದ್ರದ ನಾಯಕರು, ಈ ವಿಚಾರದ ಬಗ್ಗೆ ಅವರೇ ಚರ್ಚಿಸಲಿದ್ದಾರೆ. ಹೈ ಕಮಾಂಡ್ ನಿರ್ಧಾರಕ್ಕೆ ನಾವು ಬದ್ದ,
    ಕ್ಷೇತ್ರ ಹಂಚಿಕೆ ವಿಚಾರ ಹೈ ಕಮಾಂಡ್ ಅಂತಿಮ ಮಾಡಲಿದೆ. ಕಾಂಗ್ರೆಸ್​ ಬಿಜಿಪಿಯಿಂದ ಕೆಲವರು ನಮ್ಮ ಪಕ್ಷ ಸೇರುತ್ತಾರೆ ಎಂಬ ಯೋಚನೆಯನ್ನು ಮಾಡುತ್ತಿದೆ. ಆದ್ರೆ, ಅವರಿಗೆ ತಿಳಿದಿರಲಿ, ಬಿಜೆಪಿಯಿಂದ ಯಾರು ಕಾಂಗ್ರೆಸ್​ಗೆ ಹೋಗುವುದಿಲ್ಲ” ಎಂದು ಹೇಳಿದರು.

    ಇದನ್ನೂ ಓದಿ: ಉಹಾಪೋಹ ಬೇಡ…ಮೈತ್ರಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ

    “ಪಕ್ಷ ಬಲಪಡಿಸುವ ಆಸೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ರೆ, ನಮ್ಮ ಪಕ್ಷದಿಂದ ಯಾವ ನಾಯಕರು ಕೂಡ ಬಿಜೆಪಿ ತ್ಯಜಿಸಿ ಕಾಂಗ್ರೆಸ್​ ಸೇರ್ಪಡೆಯಾಗುವುದಿಲ್ಲ. ಕಾಂಗ್ರೆಸ್​ನ ಆಂತರಿಕ ವಿಚಾರದ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ” ಎಂದು ಹೇಳಿದರು.

    ವಾರಣಾಸಿ ಏರ್​ಪೋರ್ಟ್​ಗೆ ಬಾಂಬ್​ ಬೆದರಿಕೆ ಕರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts