More

    ಈ ಸರ್ಕಾರಕ್ಕೆ ಯಾವುದೇ ಆಪರೇಷನ್​ ಬೇಕಿಲ್ಲ, ನ್ಯಾಚುರಲ್​ ಡೆಲಿವರಿ ಆಗಲಿದೆ ಕಾಯಿರಿ: ಬಸನ್​ಗೌಡ ಪಾಟೀಲ್​ ಯತ್ನಾಳ್​

    ವಿಜಯನಗರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಬಗ್ಗ ತಮಗೆ ಏನು ತಿಳಿದಿಲ್ಲ. ಪಕ್ಷದ ವರಿಷ್ಠರು ಸಹ ಇದರ ಬಗ್ಗೆ ಏನು ಮಾತನಾಡಿಲ್ಲ ಎಂದು ವಿಜಯಪುರ ಕ್ಷೇತ್ರದ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

    ಹೊಸಪೇಟೆಯಲ್ಲಿ ಈ ಕುರಿತು ಮಾತನಾಡಿದ ಯತ್ನಾಳ್​ ಈ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪನವರ ಮಾತನ್ನು ಅಲ್ಲಗಳೆಯುವಂತಿಲ್ಲ. ಮೈತ್ರಿ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲಾ ಎಂದಿದ್ದಾರೆ.

    ಹೆಚ್ಚಾಗಿ ತಿಳಿದಿಲ್ಲ

    ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ನನಗಾಗಲಿ ಪ್ರಲ್ಹಾದ್​ ಜೋಶಿ ಅವರಿಗಾಗಲಿ ತಿಳಿದಿಲ್ಲ. ಪಕ್ಷದ ವರಿಷ್ಠರು ಸಹ ಇದರ ಬಗ್ಗೆ ತಿಳಿಸಿಲ್ಲ. ಮಾಜಿ ಸಿಎಂ ಯಡಿಯೂರಪ್ಪನವರಿಗೆ ಅವರದೇ ಆದ ಸುದ್ದಿ ಮೂಲದಿಂದ ಮಾಹಿತಿ ಬಂದಿರಬಹುದು. ಹಾಗೆಂದ ಮಾತ್ರಕ್ಕೆ ಅವರ ಮಾತನ್ನು ಅಲ್ಲಗಳೆಯುವಂತಿಲ್ಲ. ಮೈತ್ರಿ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

    ಸಚಿವ ದಿನೇಶ್​ ಗುಂಡೂರಾವ್​ ಟೀಕೆಗೆ ಪ್ರತಿಕ್ರಿಯಿಸಿ ಕಳೆದ ಬಾರಿ ಕಾಂಗ್ರೆಸ್​ನವರು ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡಾಗ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂದು ಹೇಳೋಣವೇ ಎಂದು ಕುಟುಕಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನಲ್ಲಿ ದಾಖಲೆ ಬರೆದ ಜವಾನ್​; ಮೊದಲ ದಿನ ಗಳಿಸಿದ್ದೆಷ್ಟು ಗೊತ್ತಾ?

    ನ್ಯಾಚುರಲ್​ ಡೆಲಿವರಿ ಆಗಲಿದೆ.

    ಕಾಂಗ್ರೆಸ್​ ತನ್ನ ಶಾಸಕರಿಗೆ ಬೆದರಿಕೆ ಹಾಕಲು ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಪಕ್ಷದವರು ಯಾರು ಕಾಂಗ್ರೆಸ್​ಗೆ ಸೇರುವುದಿಲ್ಲ. ಈ ಸರ್ಕಾರಕ್ಕೆ ಯಾವುದೇ ಆಪರೇಷನ್​ ಬೇಕಿಲ್ಲ, ನ್ಯಾಚುರಲ್​ ಡೆಲಿವರಿ ಆಗಲಿದೆ. ಕೆಲವು ತಿಂಗಳುಗಳು ಕಾಯಿರಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

    135 ಜನ ಶಾಸಕರಿದ್ದಾರೆ. ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳುವ ಇವರಿಗೆ ಆಪರೇಷನ್​ ಮಾಡುವ ಅಗತ್ಯವೇನಿದೆ. ಪಕ್ಷ ಒಡೆಯುತ್ತದೆ ಎಂಬ ಭಯ ಕಾಂಗ್ರೆಸ್​ ನಾಯಕರಿಗೆ ತೀವ್ರವಾಗಿ ಕಾಡುತ್ತಿದೆ. ಶಾಸಕರಾದ ಬಸವರಾಜ್​ ರಾಯರೆಡ್ಡಿ, ಬಿ.ಆರ್​. ಪಾಟೀಲ್​, ಬಿ.ಕೆ. ಹರಿಪ್ರಸಾದ್​ ಅವರೆಲ್ಲಾ ಬಹಿರಂಗವಾಗಿಯೇ ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

    ಮಹಾರಾಷ್ಟ್ರದಲ್ಲಿ ಎನ್​ಸಿಪಿಗೆ ಆದ ಗತಿಯೇ ಕರ್ನಾಟಕದಲ್ಲೂ ಆಗಲಿದೆ. ಶರದ್​ ಪವಾರ್​ ಹಾಗೂ ಸುಪ್ರಿಯಾ ಸುಳೆರನ್ನು ಹೊರತುಪಡಿಸಿದರೆ ಬೇರೆ ಯಾರು ಉಳಿದಿಲ್ಲ. ಕರ್ನಾಟಕದಲ್ಲೂ ಅಂತಹ ಸ್ಥಿತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts