More

    ಬಾಲಿವುಡ್​ನಲ್ಲಿ ದಾಖಲೆ ಬರೆದ ಜವಾನ್​; ಮೊದಲ ದಿನ ಗಳಿಸಿದ್ದೆಷ್ಟು ಗೊತ್ತಾ?

    ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ನಟನೆಯ ಬಹು ನಿರೀಕ್ಷಿತ ಜವಾನ್ ಚಿತ್ರವು ಗುರುವಾರ ವಿಶ್ವದಾದ್ಯಂತೆ ತೆರೆ ಕಂಡಿದ್ದು, ಭರ್ಜರಿ ಒಪನಿಂಗ್​ ಪಡೆದುಕೊಂಡಿದೆ.

    ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ 129.6 ಕೋಟಿ ಕಲೆಕ್ಷನ್​ ಮಾಡುವ ಮೂಲಕ ಬಾಲಿವುಡ್​ ಇತಿಹಾಸದಲ್ಲೇ ಶಾರುಖ್​ ನಟನೆಯ ಸಿನಿಮಾ ಹೊಸ ದಾಖಲೆ ಬರೆದಿದೆ.

    ಇದನ್ನೂ ಓದಿ: ಘೋಸಿ ಉಪಚುನಾವಣೆ ಗೆಲುವು; ಇಲ್ಲಿಂದಲ್ಲೇ ಬಿಜೆಪಿಯ ಪತನ ಆರಂಭವೆಂದ ಅಖಿಲೇಶ್​ ಯಾದವ್

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಿರ್ಮಾಣ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೀತಿ ನೀಡಿದ್ದಕ್ಕೆ ಧನ್ಯವಾದಗಳು. ಇದು ಕೇವಲ ಆರಂಭ ಮಾತ್ರ. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತ್ಯಧಿಕೆ ಗಳಿಕೆ ಕಂಡ ಮೊದಲ ಚಿತ್ರ ಎಂಬ ಪೋಸ್ಟರ್​ಅನ್ನು ಸಹ ರೆಡ್​ ಚಿಲ್ಲೀಸ್​ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.

    ಚಿತ್ರ ವಮರ್ಶಕ ತರಣ್​ ಆದರ್ಶ್​ ಜವಾನ್​ ಚಿತ್ರದ ವಿದೇಶಿ ಗಳಿಕೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ 2.11 ಕೋಟಿ, ನ್ಯೂಜಿಲೆಂಡ್​ನಲ್ಲಿ 39.13 ಲಕ್ಷ, ಜರ್ಮನಿಯಲ್ಲಿ 1.3 ಕೋಟಿ, ಬ್ರಿಟನ್​ನಲ್ಲಿ 2.16 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಆಂತರಾಷ್ಟ್ರೀಯ ಬಾಕ್ಸ್​ಆಫೀಸ್​ನಲ್ಲಿ ಜವಾನ್​ ಚಿತ್ರ ಉತ್ತಮ ಗಳಿಕೆ ಮೂಲಕ ವಿದೇಶಗಳಲ್ಲಿಯೂ ಶಾರುಖ್​ ಖಾನ್​ ತಮ್ಮ ಸಾರ್ವಭೌಮತೆಯನ್ನು ಸಾಬೀತು ಮಾಡಿದ್ದಾರೆ ಎಂದು ತರಣ್​ ಆದರ್ಶ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts