

ಕೋಟ: ಹಂದಟ್ಟು ಕೋಟ ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನ ವಾರ್ಷಿಕ ರಥೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಗುರುವಾರ ಜರುಗಿತು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಮರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಮೂರ್ತಿ ಉರಾಳ, ಜಯರಾಮ ಶೆಟ್ಟಿ, ಯಕ್ಷಗಾನ ನೇಪಥ್ಯ ಕಲಾವಿದ ರಾಜು ಪೂಜಾರಿ, ಸಮಾಜಸೇವಕಿ ಭಾರತಿ ವಿ. ಮಯ್ಯ, ಡಾಕ್ಟರೇಟ್ ಪದವಿ ಪಡೆದ ಡಾ.ಗಣೇಶ ಉರಾಳ, ಸ್ಥಳ ದಾನಿಗಳಾದ ಮಹಾಲಕ್ಷ್ಮೀ ಹಂದೆ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ರಾಧಾ ಮರಕಾಲ್ತಿ ಅವರನ್ನು ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಅಬಾಕಸ್ ವಿಜೇತ ಅದ್ವಿತ್, ರಾಷ್ಟ್ರಮಟ್ಟದ ಕರಾಟೆಯಲ್ಲಿ ವಿಜೇತ ಪ್ರಜಿತ್, ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸಾಧಕ ಮನ್ವಿತ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ನಿವೃತ್ತ ಶಿಕ್ಷಕ ಹಂದಟ್ಟು ಸೂರ್ಯನಾರಾಯಣ ಹಂದೆ ಮತ್ತು ಯಶೋದಾ ಹಂದೆ ಪ್ರಾಯೋಜಕತ್ವದಲ್ಲಿ ಕಲಾವಿದರಾದ ಮಹಾಬಲ ದೇವಾಡಿಗ, ಹಳ್ಳಾಡಿ ಜಯರಾಮ ಶೆಟ್ಟಿ, ಹೊಳೆಮಗೆ ನಾಗಪ್ಪ, ರಮೇಶ್ ಭಂಡಾರಿ, ಲಕ್ಷ್ಮಣ ಭಂಡಾರಿ, ಕ್ಯಾದಿಗಿ ಮಹಾಬಲೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.
ನರಸಿಂಹ ಸೋಮಯಾಜಿ ಹಂದಟ್ಟು ಕೊಡಮಾಡಿದ ಕಲಾಪೋಷಕ ನರಸಿಂಹ ಸೋಮಯಾಜಿ ಪ್ರಶಸ್ತಿಯನ್ನು ವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರಿಗೆ ನೀಡಲಾಯಿತು. ಯಕ್ಷಗಾನ ಕಲಾ ಸಂಘಟಕ, ಚಿಂತಕ ಜನಾರ್ದನ ಹಂದೆ, ಹಂದೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಾರಾಮ ಹಂದೆ, ಸುರೇಶ ಪೂಜಾರಿ, ಉದಯ ಹಂದೆ ಉಪಸ್ಥಿತರಿದ್ದರು. ಹಂದಟ್ಟು ವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಡಾ.ಎಚ್.ವೆಂಕಟರಮಣ ಸೋಮಯಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆನಂದರಾಮ ಉರಾಳ ವಂದಿಸಿದರು. ಸುಜಾತ ಬಾರಿ, ಮಂಜುನಾಥ ಉರಾಳ, ಜಾನಕಿ ಹಂದೆ ಸಹಕರಿಸಿದರು. ಶಿಕ್ಷಕಿ ಆಶಾ ಕಿರಣ್ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.