ನಮ್ಮ ಪ್ರಧಾನಿ ದೇವರಿದ್ದಂತೆ ಎಂದ ಮಾಜಿ ರಾಜ್ಯಪಾಲರು!

koshyari
Published on

ನವದೆಹಲಿ: ಇಲ್ಲೊಬ್ಬ ಮಾಜಿ ರಾಜ್ಯಪಾಲರು, ಪ್ರಧಾನಿ ಮೋದಿಯನ್ನು ದೇವರು ಎಂದು ಪರಿಗಣಿಸಿದರೆ ತಪ್ಪಲ್ಲ ಎಂದಿದ್ದಾರೆ. ಅದಕ್ಕೆ ಆ ರಾಜ್ಯದ ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದ್ದಾರೆ ಕೂಡ.

ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೊಶ್ಯಾರಿ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನೀಡಿದ್ದ ಇತ್ತೀಚಿನ ಹೇಳಿಕೆ ವೈರಲ್ ಆದ್ದರಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ನಮ್ಮ ಪ್ರಧಾನಿ ದೇವರಿದ್ದಂತೆ...

‘ನಮ್ಮ ಪ್ರಧಾನಿ ನಮಗೆ ದೇವರಿದ್ದಂತೆ, ಅವರನ್ನು ಪೂಜಿಸಿದರೆ ಯಾವುದೇ ಹಾನಿ ಇಲ್ಲ’ ಎಂದು ಕೊಶ್ಯಾರಿ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಉತ್ತರಾಖಂಡದ ರಾಮನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿವಾದ ಹುಟ್ಟು ಹಾಕಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಗಿಬಿದ್ದ ವಿರೋಧ ಪಕ್ಷಗಳು

ಮಾಜಿ ರಾಜ್ಯಪಾಲರ ಹೇಳಿಕೆಯಿಂದಾಗಿ ವಿರೋಧ ಪಕ್ಷಗಳು ಬಿಜೆಪಿ ಮತ್ತು ಕೋಶ್ಯಾರಿ ವಿರುದ್ಧ ವಾಗ್ದಾಳಿ ನಡೆಸಿವೆ. ಅವರು ಹೇಳಿಕೆಯನ್ನು ಟೀಕಿಸಿದ್ದು ಬಿಜೆಪಿಯು ಪ್ರಧಾನಿಯ ಸುತ್ತ ವ್ಯಕ್ತಿ ಆರಾಧನೆಯನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ರಾಜಕೀಯ ವೈಷಮ್ಯ ಹೆಚ್ಚಾಗಬಹುದು ಎಂಬ ಊಹೆಗೆ ಕಾರಣವಾಗಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net