More

    ನೌಕಾನೆಲೆ ಜಾಗದಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಅನುಮತಿ ಕೊಟ್ಟರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ: ಬಿ.ಕೆ.ಹರಿಪ್ರಸಾದ್

    ಕಾರವಾರ: ನೌಕಾನೆಲೆ ಜಾಗದಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಅನುಮತಿ ಕೊಟ್ಟರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

    ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾನೆಲೆ ಜಾಗದಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಅನುಮತಿ ಕೊಟ್ಟರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತೇವೆ. ಬಿಜೆಪಿ ಶ್ರೇಷ್ಠ ನಾಯಕತ್ವ ರಾಜ್ಯಕ್ಕೆ ಬಂದು ಹೇಳಿಕೆ‌ ಕೊಡುವುದನ್ನು ನೋಡಿದರೆ, ರಾಜ್ಯದಲ್ಲಿ ಬಿಜೆಪಿ ಇದೆಯೋ, ಇಲ್ಲವೋ ಎಂದು ಅನುಮಾನ ಬರುತ್ತಿದೆ. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕನ್ನ ಹಾಕಿ, ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದನ್ನು ನೋಡುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.

    ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಜೆ.ಪಿ. ನಡ್ಡಾ ಅವರು ರಾಜ್ಯಕ್ಕೆ ಬಂದು, ಹೊಸದೇನನ್ನೂ ‌ಹೇಳುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ 4 ಲಕ್ಷ ಜನ ಸತ್ತಾಗ ಸಾಂತ್ವನ ಹೇಳಲು ಅವರು ಬಂದಿಲ್ಲ. ಪ್ರವಾಹ ಬಂದಾಗ ಬಂದು ಅನುಕಂಪ, ಸಾಂತ್ವನ ಹೇಳುವ ಕಾರ್ಯವನ್ನು ಪ್ರಧಾನಿಗಳು ಗೃಹ ಮಂತ್ರಿಗಳು ಮಾಡಿಲ್ಲ. ಪ್ರವಾಹದ ಸಂದರ್ಭದಲ್ಲಿ ಪ್ರಧಾನಿಗಳು ಪಕ್ಕದ ತೆಲಂಗಾಣ, ಒಡಿಶಾಕ್ಕೆ ಹೋಗಿದ್ದರು, ಕರ್ನಾಟಕ ರಾಜ್ಯಕ್ಕೆ ಬಂದು‌ ವೈಮಾನಿಕ ಸಮೀಕ್ಷೆ ಮಾಡಿಲ್ಲ. ರಾಜ್ಯ ಸರ್ಕಾರ 35 ಸಾವಿರ ಕೋಟಿ, ನಷ್ಟ ತೋರಿಸಿದರೆ, 5 ಸಾವಿರ ಕೋಟಿ‌ ಮಾತ್ರ ಕೇಂದ್ರ ಕೊಟ್ಟಿತು.‌ ರಾಜ್ಯಕ್ಕೆ ಅನ್ಯಾಯ ಮಾಡಿತು ಎಂದು ಆರೋಪ ಮಾಡಿದ್ದಾರೆ.

    ಇದನ್ನೂ ಓದಿ: ಭಿನ್ನಮತ ಮರೆತು ಕೆಲಸ ಮಾಡಿ; ವಿಜಯಪುರ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ
    ಬಿಜೆಪಿ ಈಗ ಮತ ಕೇಳಲು ಬರುತ್ತಿರುವುದಕ್ಕೆ ನಾಚಿಕೆಯಾಗಬೇಕು. ಮೋದಿ ಅವರು ಚಾಮರಾಜನಗರಲ್ಲಿ ಹುಲಿ‌ ನೋಡಲು ಹೋಗಿದ್ದರು. ಹುಲಿ‌ ಕೂಡ ಅದಾನಿಗೆ ಮಾರುತ್ತಾರೆ ಎಂಬ ಭಯದಲ್ಲಿ ಓಡಿ ಹೋಗಿದ್ದವು. ಅಲ್ಲಿಯೇ ಸಮೀಪ ಆಕ್ಸಿಜನ್ ಸಿಗದೇ ಅವಘಡ ನಡೆದಿತ್ತು. 37 ಜನ ಮೃತಪಟ್ಟಿದ್ದರು. ಅವರ ಸಂಕಷ್ಟ ಕೇಳಿಲ್ಲ. ಆದರೆ, ರಾಹುಲ್ ಹೋಗಿ ಅವರನ್ನು ಭೇಟಿಯಾದರು. ಸಮಸ್ಯೆ ಆಲಿಸಿದರು. ಮೋದಿ, ಷಾ, ನಡ್ಡಾ 2014. ರಿಂದ ಒಂದೇ ಕತೆ‌ ಹೇಳುತ್ತಿದ್ದಾರೆ. ಬಿಜೆಪಿ ಮನೆ ದೇವರೇ ಸುಳ್ಳು.‌ ಕರ್ನಾಟಕದ ಜನ‌ ತ್ರಿವಿಕ್ರಮರು.‌ ಚುನಾವಣೆಯಲ್ಲಿ‌ ಬಿಜೆಪಿ‌ ಮುಕ್ತ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ಸನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸ ರಾಹುಲ್ ಗಾಂಧಿ ನೇತೃತ್ವದಲ್ಲೇ ಆಗುತ್ತದೆ: ಬಿ.ವೈ. ವಿಜಯೇಂದ್ರ 
    ಚುನಾವಣೆಯಲ್ಲಿ ಬೆಲೆ ಏರಿಕೆ‌ ಮಿತಿ‌ ಮೀರಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ವಿಷಯ‌ ಬಿಟ್ಟು, ಜಾತಿ‌ ರಂಗ ಪ್ರವೇಶ ಮಾಡಿದ್ದು, ನೋಡಿದರೆ, ಜನಸಾಮಾನ್ಯರ ಮೇಲೆ ನಂಬಿಕೆ ಇಲ್ಲ ಎಂಬುದು ತೋರುತ್ತದೆ.ನಾ ಖಾವುಂಗಾ, ನಾ ಖಾನೆ ದೂಂಗಾ ಎಂದು ಪ್ರಧಾನಿ ಹೇಳುತ್ತಿದ್ದರು ಎಂದಿದ್ದಾರೆ.

    ಕಾಂಗ್ರೆಸ್​​ನವರಿಗೆ ಸೋಲಿನ ಸುಳಿವು ಸಿಕ್ಕಿದೆ‌…ಜನರೇ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ; ಬಿಸ್​ಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts