

ವಿಜಯಪುರ: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಿಲ್ಲೆಯ ಕೆಲ ನಾಯಕರಿಗೆ ಸವಾಲೊಂದನ್ನು ನೀಡಿದ್ದಾರೆ. ಕಾಂಗ್ರೆಸ್ ನಾಯಕರಾದ ಎಂ.ಬಿ. ಪಾಟೀಲ್, ಯಶವಂತರಾಯಗೌಡ ಪಾಟೀಲ್, ಹಾಗೂ ಶಿವಾನಂದ ಪಾಟೀಲ್ ಸೇರಿದಂತೆ ಕೆಲ ನಾಯಕರಿಗೆ ಒಳ ಜಗಳ ಬಿಟ್ಟು ಪಕ್ಷದ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿ ಖಡಕ್ ಸೂಚನೆ ನೀಡಿದ್ದಾರೆ.
ನೀವು ಗೆಲ್ಲುವುದರ ಜತೆಗೆ ಪಕ್ಕದ ಕ್ಷೇತ್ರಗಳನ್ನು ಗೆಲ್ಲಿಸುವ ವಿಚಾರವಾಗಿ ಗಮನಕೊಡಿ. ಪಕ್ಷಕ್ಕಾಗಿ ವೈಯಕ್ತಿಕ ಭಿನ್ನಮತ ಮರೆತು ಒಂದಾಗಿ ಕೆಲಸ ಮಾಡಿ. ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಒಳ್ಳೆಯ ವಾತಾವರಣ ಇದೆ. ಎಂಟೂ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನಾದರೂ ಗೆಲ್ಲುಬೇಕು ಎಂದು ನಾಯಕರಿಗೆ ರಾಹುಲ್ ಗಾಂಧಿ ಹೇಳಿದ್ದಾರೆ.
ಶಿವಾನಂದ ಪಾಟೀಲ್ ಹಾಗೂ ಎಂಬಿ ಪಾಟೀಲ್ಗೆ ರಾಹುಲ್ ಗಾಂಧಿ ಕಿವಿ ಮಾತು ಹೇಳಿದ್ದು, ನೀಮ್ಮ ಕ್ಷೇತ್ರದಲ್ಲಿ ಎಂ.ಬಿ ಪಾಟೀಲ್ ಪ್ರಚಾರ ಮಾಡಲಿ, ಎಂ.ಬಿ ಪಾಟೀಲ್ ಕ್ಷೇತ್ರದಲ್ಲಿ ನೀವು ಪ್ರಚಾರ ಮಾಡಿ. ಇಬ್ಬರು ನಿಮ್ಮ ನಿಮ್ಮ ಕ್ಷೇತ್ರಗಳ ಜೊತೆಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಕಡೆಗೂ ಗಮನ ಕೊಡಿ. ಸಾಧ್ಯವಾದ್ರೆ ಪಕ್ಕದ ಜಿಲ್ಲೆಯಲ್ಲಿ ಕೂಡ ಪ್ರಚಾರ ಮಾಡಿ ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.