ಸ್ವಚ್ಛತಾ ಕರ್ಮಿಗೆ ಶೇಕ್​ಹ್ಯಾಂಡ್​ ಕೊಟ್ಟು ರಾಹುಲ್​ ಗಾಂಧಿ ಕೈ ಒರೆಸಿಕೊಂಡ್ರಾ? ಗಂಭೀರ ಆರೋಪ ಮಾಡಿದ ಬಿಜೆಪಿ ವಕ್ತಾರ…

rahul gandhi
Published on

ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ಹಸ್ತಲಾಘವ ಮಾಡಿದ ನಂತರ ತನ್ನ ಪ್ಯಾಂಟ್​ಗೆ ಕೈಗಳನ್ನು "ಒರೆಸಿಕೊಂಡರು" ಎಂದು ಆರೋಪಿಸಲಾಗಿದೆ.

ರಾಹುಲ್ ಗಾಂಧಿ ಶನಿವಾರ ದೆಹಲಿಯ ಲುಟಿಯನ್ಸ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದರು.

ಟ್ವಿಟ್ಟರ್‌ನಲ್ಲಿ ಗಾಂಧಿಯವರ ವೀಡಿಯೊವನ್ನು ಹಂಚಿಕೊಂಡಿರುವ ಅಮಿತ್ ಮಾಳವಿಯಾ, “ರಾಹುಲ್ ಗಾಂಧಿ ತಮ್ಮ ಮನೆಯ ಸಿಬ್ಬಂದಿಯೊಂದಿಗೆ ಹಸ್ತಲಾಘವ ಮಾಡಿದ ನಂತರ ತಮ್ಮ ಕೈಯನ್ನು ಒರೆಸುತ್ತಾರೆ. ಈ ವ್ಯಕ್ತಿ, ಅದಷ್ಟು ವರ್ಷಗಳ ಕಾಲ ಆತನಿಗೆ ಸೇವೆ ಸಲ್ಲಿಸಿರಬೇಕು. ಆದರೂ ಇಂತಹ ತಿರಸ್ಕಾರ..." ಎಂದು ಬರೆದುಕೊಂಡಿದ್ದಾರೆ.

"ಟ್ರಿಮ್" ಮಾಡಿದ ವೀಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಶೀಘ್ರವಾಗಿ ತಿರುಗೇಟು ನೀಡಿದ್ದು "ನಿಮ್ಮ ಜೀವನ ವ್ಯರ್ಥವಲ್ಲವೇ? ಬೆಳಿಗ್ಗೆ ಎದ್ದೇಳಿ, ವೀಡಿಯೊವನ್ನು ಟ್ರಿಮ್ ಮಾಡಿ, ನಂತರ ಅದನ್ನು ಅರ್ಧದಷ್ಟು ಕತ್ತರಿಸಿ ನಿಮ್ಮ ಬಾಸ್ ಅನ್ನು ಮೆಚ್ಚಿಸಲು ದಿನವಿಡೀ ಆ ವಿಡಿಯೋವನ್ನು ಹರಡಿ" ಎಂದು ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ನಿತಿನ್ ಅಗರ್ವಾಲ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net