

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಹರಕೆ ಕೋಲದಲ್ಲಿ ಭಾಗಿಯಾದ ಶಾಸಕ ವಿನಯ ಕುಲಕರ್ಣಿ, ಕೊರಗಜ್ಜನ ಬಳಿ ತಮಗೆದುದಾಗಿರುವ ಸಂಕಷ್ಟದ ಬಗ್ಗೆ ಅರಿಕೆ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಬಗ್ಗೆ, ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆ ಅರಿಕೆ ಮಾಡಿದ್ದಾರೆ.
ತಪ್ಪು ಮಾಡೋದು ಸಹಜ, ಆದರೆ ಅದನ್ನು ತಿದ್ದಿಕೊಂಡು ಮುಂದುವರಿಯುವುದು ಉತ್ತಮ ಗುಣ. ಯಾವುದು ಸರಿ ಯಾವುದು ತಪ್ಪು ಎಂಬ ಹಾಗೂ ನಿಮ್ಮ ಮುಂದಿನ ಭವಿಷ್ಯದ ಲೆಕ್ಕ ನನ್ನ ಬಳಿ ಇದೆ. ಕಲಿಯುಗದಲ್ಲಿ ಯಾವುದು ಆಗುವುದಿಲ್ಲವೋ ಅದನ್ನು ನಾನು ಮಾಡಿಸುತ್ತೇನೆ. ಕಷ್ಟ ನಿವಾರಿಸುತ್ತೇನೆ. ನಿಮ್ಮ ಜೊತೆ ನಾಲ್ಕು ಜನ ಒಳ್ಳೆಯವರಿದ್ದರೆ ಐದು ಜನ ಕೆಟ್ಟವರಿದ್ದಾರೆ. ಎಲ್ಲ ಸಂಕಷ್ಟ ನಿವಾರಿಸಿ ಕುಟುಂಬದ ರಕ್ಷಣೆ ಮಾಡುವುದಾಗಿ ಕೊರಗಜ್ಜನ ಅಭಯ ನೀಡಿದೆ.