'ರೋಲೆಕ್ಸ್' ಆದ ನಟ ಕೋಮಲ್ … ಜನವರಿಯಲ್ಲಿ ಚಿತ್ರ ಪ್ರಾರಂಭ

Komal Kumar
Published on

ಬೆಂಗಳೂರು: ಕಳೆದ ತಿಂಗಳು ಶುರುವಾದ 'ಕಾಲಾಯ ನಮಃ' ಚಿತ್ರದ ಸಂದರ್ಭದಲ್ಲಿ ಕೋಮಲ್​ ಒಂದು ಮಾತು ಹೇಳಿದ್ದರು. ಮೂರ್ನಾಲ್ಕು ಚಿತ್ರಗಳನ್ನು ಹೊಸದಾಗಿ ಒಪ್ಪಿದ್ದು, ಒಂದರ ಹಿಂದೊಂದು ಪ್ರಾರಂಭವಗುತ್ತದೆ ಎಂದು ಅವರು ಹೇಳಿದ್ದರು. ಅದರಂತೆ ಕೋಮಲ್​ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರ ಘೋಷಣೆಯಾಗಿದೆ. ಅದೇ 'ರೋಲೆಕ್ಸ್'.

'ರೋಲೆಕ್ಸ್​' ಎಂಬ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು 'ವಿಕ್ರಮ್​' ಚಿತ್ರದಲ್ಲಿನ ಸೂರ್ಯ ಅವರ ರೋಲೆಕ್ಸ್​ ಪಾತ್ರ. ಆ ಪಾತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಚಿತ್ರಕ್ಕೆ 'ರೋಲೆಕ್ಸ್​' ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರಿನ ಮಹತ್ವವೇನು? ಕೋಮಲ್​ ಈ ಚಿತ್ರದಲ್ಲಿ ಏನಾಗಿರುತ್ತಾರೆ? ಅವರ ಪಾತ್ರವೇನು? ಮುಂತಾದ ಎಲ್ಲಾ ಪ್ರಶ್ನೆಗಳಿಗೂ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇದಕ್ಕೂ ಮುನ್ನ 'ಬಿಲ್ ಗೇಟ್ಸ್' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಮಂಡ್ಯ, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಫೀನಿಕ್ಸ್ ಎಂಟರ್​ಟೈನ್ಮೆಂಟ್ಸ್ ಸಂಸ್ಥೆಯಡಿ ಅನಿಲ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ದೊಡ್ಡ ತಾರಾಗಣ ಇರುವ ಈ ಚಿತ್ರಕ್ಕೆ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಮತ್ತು ಜೆಸ್ಸಿ ಗಿಫ್ಟ್​ ಸಂಗೀತವಿದೆ.

ಜನವರಿ ತಿಂಗಳಲ್ಲಿ ಈ ಚಿತ್ರ ಸೆಟ್ಟೇರಲಿದ್ದು, ಚಿತ್ರದ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net