

ಉಡುಪಿ: ಕನ್ನಡ ಚಿತ್ರರಂಗದ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಸ್ಯಾಂಡಲ್ವುಡ್ನಲ್ಲಿ ವೈರಲ್ ಆಗಿತ್ತು. ನಂತರ ತಮ್ಮ ಮದುವೆ ವಿಷಯವನ್ನು ಜಗತ್ತಿನ ಎದುರಿಟ್ಟು ಎಲ್ಲರಿಗೂ ಸಂತಸ ತುಂಬಿದ ಶಾಕ್ ನೀಡಿದ್ದರು.
ಇದೀಗ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಶುಕ್ರವಾರ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಅದಾದ ನಂತರ ಉಡುಪಿಯ ಕಾಣಿಯೂರು ಮಠಕ್ಕೆ ಭೇಟಿ ನೀಡಿ ವಿದ್ಯಾವಲ್ಲಭ ತೀರ್ಥ ಶ್ರೀಗಳಿಂದ ಅನುಗ್ರಹ ಮತ್ತು ಮಂತ್ರಾಕ್ಷತೆ ಪಡೆದಿದ್ದಾರೆ.
ಈ ಸಂದರ್ಭ ಮಠದವರು ಯುವ ಜೋಡಿಯನ್ನು ಆಶೀರ್ವದಿಸಿ ಗೌರವಿಸಿದ್ದಾರೆ.