ಈ ಜನರು ತಮ್ಮ ದೇಶವನ್ನು ಏನೆಂದು ಕರೀತಾರೆ ಎಂದು ಗೊತ್ತಾದ್ರೆ ಹುಬ್ಬೇರೋದು ಗ್ಯಾರೆಂಟಿ..!

geopolitics
Published on

ಬೆಂಗಳೂರು: ಜಾಗತಿಕವಾಗಿ ಭಾರತ ಇಂಡಿಯಾ ಎಂದು ಕರೆಯಲ್ಪಡುತ್ತೆ. ಇಡೀ ಜಗತ್ತಿನಲ್ಲಿ ಎರಡು ಹೆಸರುಗಳಿರುವ ದೇಶ ನಮ್ಮ ಭಾರತ ಒಂದೇ ಅಲ್ಲ. ಕೆಲವು ದೇಶಗಳಿಗಂತು ಮೂರು ನಾಲ್ಕು ಹೆಸರುಗಳೂ ಇವೆ. ಈ ದೇಶಗಳು ಬ್ರಿಟೀಷರು ಆಕ್ರಮಿಸಿದ ದೇಶಗಳು ಮಾತ್ರವಲ್ಲ. ಯುರೋಪಿನಲ್ಲೇ ಎರಡೆರಡು ಹೆಸರು ಇರುವ ದೇಶಗಳು ಇವೆ!

ಇದಕ್ಕೆ ಕಾರಣ ಅಲ್ಲಿನ ಜನ ತಮ್ಮನ್ನು ತಾವು ಬೇರೆ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಈ ದೇಶಗಳು ಯಾವುವು? ಈ ದೇಶಗಳ ಬೇರೆ ಬೇರೆ ಹೆಸರುಗಳು ಯಾವುವು ಎಂದು ತಿಳಿಯಬೇಕೆ? ಪೂರ್ತಿ ಸುದ್ದಿ ಓದಿ.

ಇಂಡಿಯಾ - ಭಾರತ
ಭೂತಾನ್​ - ದ್ರುಕ್​ ಯೂಲ್​
ಚೀನಾ - ಝಾಂಗ್ಗುವೊ
ಫಿನ್​ಲ್ಯಾಂಡ್​ - ಸುವೋಮಿ
ಜರ್ಮನಿ - ಡಾಶ್​ಲ್ಯಾಂಡ್​
ಉತ್ತರ ಕೊರಿಯಾ - ಚೋಸಾನ್​, ಬುಕ್​ ಚೋಸಾನ್​
ದಕ್ಷಿಣ ಕೊರಿಯಾ - ಹಾಂಗುಕ್​ , ನಮ್​ಹಾನ್​
ಜಪಾನ್​ - ನಿಪ್ಪೊನ್​
ಮಾಲ್ಡೀವ್ಸ್​ - ಧಿವೆಹಿ ರಾಜ್ಜೆ
ಅಲ್ಜೀರಿಯಾ -ಝಾಯೆರ್​​
ಬೆಲ್ಜಿಯಂ - ಬೆಲ್ಗೇ, ಬೆಲ್ಗೀಕ್​, ಬೆಲ್ಜಿಯೆನ್​
ಬೊಲಿವಿಯಾ - ವುಲಿವ್ಯಾ, ವೊಲಿವಿಯಾ, ಬುಲಿವ್ಯ
ಈಜಿಪ್ತ್​ - ಮಿಸ್ರ್​
ಸೈಪ್ರಸ್​ - ಕೆಬ್ರಿಸ್​
ಗ್ರೀಸ್​ - ಹೆಲ್ಲಾಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net