ಕರ್ತವ್ಯ ನಿರತ ಪೊಲೀಸ್​ ಪೇದೆ ಹೃದಯಾಘಾತದಿಂದ ಠಾಣೆಯಲ್ಲೆ ಸಾವು: ಕೋಲಾರದಲ್ಲಿ ಘಟನೆ

Police
Published on

ಕೋಲಾರ: ಕರ್ತವ್ಯ ನಿರತ ಪೊಲೀಸ್​ ಪೇದೆ ಹೃದಯಾಘಾತದಿಂದ ಠಾಣೆಯಲ್ಲೇ ಮೃತಪಟ್ಟಿರುವ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಸುರೇಶ್ (48) ಮೃತಪಟ್ಟ ಮುಖ್ಯಪೇದೆ. ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಸುರೇಶ್ ಅವರಿಗೆ ಬೆಳಗ್ಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಸುರೇಶ್​ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಧರಣಿದೇವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net