

Vijayadashami; ದಸರಾ (ನವರಾತ್ರಿ) ಒಂದು ಪವಿತ್ರವಾದ ಹಬ್ಬವಾಗಿದ್ದು, ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಆರೋಗ್ಯ ಮತ್ತು ಐಶ್ವರ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇನ್ನೂ ದಸರಾ ಅಥವಾ ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. ದಸರಾ ಹಬ್ಬವು ಸಾಕಷ್ಟು ಹಿನ್ನೆಲೆಯನ್ನು ಹೊಂದಿರುವ ದಿನವಾಗಿದೆ. ಈ ಹಬ್ಬವು ಅಪಾರ ಮಹತ್ವವನ್ನು ಹೊಂದಿದ್ದು, ಇದು ರಾಮನ ವಿಜಯ ಮತ್ತು ದುಷ್ಟತನದ ಮೇಲೆ ಒಳ್ಳೆಯದರ ವಿಜಯವನ್ನು ಗುರುತಿಸುತ್ತದೆ.
ದಸರಾ ಹಬ್ಬವನ್ನು ಅಶ್ವಿನಿ ಮಾಸದ ಶುಕ್ಲ ಪಕ್ಷದ ದಶಮಿಯಂದು ಆಚರಿಸಲಾಗುತ್ತದೆ. ಈ ವರ್ಷ ದಸರಾದ ಶುಭ ಸಮಯವು ಅಕ್ಟೋಬರ್ 1 ರಂದು ಸಂಜೆ 7:02 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 2 ರಂದು ಸಂಜೆ 7:10 ಕ್ಕೆ ಕೊನೆಗೊಳ್ಳಲಿದೆ. ಹಿಂದೂ ಧರ್ಮದಲ್ಲಿ ದೀಪ ಹಚ್ಚುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ದೀಪ ಹಚ್ಚದೆ ಯಾವುದೇ ಆಚರಣೆ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಈ ದಿನ ಮನೆಯ ಹೊಸ್ತಿಲಲ್ಲಿ ದೀಪ ಹಚ್ಚಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಮನೆ ಬಾಗಿಲಲ್ಲಿ ದೀಪ ಹಚ್ಚುವುದರಿಂದ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ಕುಟುಂಬ ಸದಸ್ಯರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ ಎನ್ನಲಾಗಿದೆ. ಪ್ರಸ್ತುತ ರಾಹುವಿನ ದಶಾ ಪ್ರಭಾವದಲ್ಲಿರುವ ರಾಶಿಚಕ್ರ ಚಿಹ್ನೆಗಳು ದಸರಾ ಹಬ್ಬದ ಸಂಜೆ ದೀಪವನ್ನು ಬೆಳಗಿಸಬೇಕು. ಇದು ರಾಹುವಿನ ಯಾವುದೇ ಅಶುಭ ಪರಿಣಾಮಗಳನ್ನು ತೆಗೆದುಹಾಕುತ್ತದೆ ಎಂದು ಉಲ್ಲೇಖಿಸಲಾಗಿದೆ.
ಮನೆಯ ಪೂಜಾ ಸ್ಥಾನದಲ್ಲಿ ದೀಪವನ್ನು ಬೆಳಗಿಸುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೇವತೆಗಳ ಸನ್ನಿಧಿಯಲ್ಲಿ ತುಪ್ಪದ ದೀಪ ಅಥವಾ ಎಣ್ಣೆ ದೀಪವನ್ನು ಇಡುವುದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಪೂಜಾ ಕೋಣೆ :
ಈಶಾನ್ಯ ದಿಕ್ಕನ್ನು ಶುಭ ಮತ್ತು ಶಕ್ತಿಯ ಕೇಂದ್ರವೆಂದು ಗುರುತಿಸಲಾಗುತ್ತದೆ. ಈ ಸ್ಥಳದಲ್ಲಿ ದೀಪ ಬೆಳಗಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗಲಿದೆಯಂತೆ.
ಮನೆಯ ಈಶಾನ್ಯ ಮೂಲೆ :
ಮನೆಯ ಪ್ರವೇಶ ದ್ವಾರದ ಬಳಿ ಎರಡು ದೀಪಗಳನ್ನು ಇಡುವುದು ಒಳ್ಳೆಯದು. ಇದು ಲಕ್ಷ್ಮೀ ದೇವಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಮನೆಯ ಮುಖ್ಯ ದ್ವಾರ:
ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
ಮನೆಯ ಆವರಣದಲ್ಲಿ ತುಳಸಿ ಗಿಡವಿದ್ದರೆ, ಅದರ ಬಳಿ ಸಂಜೆಯ ವೇಳೆ ದೀಪ ಬೆಳಗಿಸುಸಿದರೆ ಸಂಪತ್ತು ಮತ್ತು ಶಾಂತಿ ಲಭಿಸುತ್ತದೆ ಎಂದು ಹೇಳಲಾಗಿದೆ.
ತುಳಸಿ ಕಟ್ಟೆ: