ಥೈರಾಯ್ಡ್ ಕಾಯಿಲೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು..

Hypothyroidism
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಯಸ್ಸಾದವರಲ್ಲಿ ಹೈಪೋಥೈರಾಯ್ಡಿಸಮ್ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾದವರಲ್ಲಿ ಥೈರಾಯ್ಡ್ ಹಾರ್ಮೋನ್ ಮಟ್ಟವು ಕಡಿಮೆಯಾಗುತ್ತದೆ ಆದಾಗ್ಯೂ, ಅನೇಕ ಜನರಿಗೆ ಹೈಪೋಥೈರಾಯ್ಡಿಸಮ್ ಇದೆ ಎಂದು ತಿಳಿದಿರುವುದಿಲ್ಲ. ಥೈರಾಯ್ಡ್ ಹಾರ್ಮೋನ್ ಪ್ರಮಾಣ ಕಡಿಮೆಯಾದರೆ ದೇಹದ ಅಂಗಾಂಗಗಳ ಸಾಮರ್ಥ್ಯ ಕುಗ್ಗುತ್ತದೆ.

ವಯಸ್ಸಾದಂತೆ ಕೀಲು ಮತ್ತು ಸ್ನಾಯು ನೋವು ಸಹಜ. ಆದರೆ ದೇಹದಲ್ಲಿ ಥೈರಾಯ್ಡ್ ಮಟ್ಟ ಕಡಿಮೆಯಾದರೂ ಕೀಲು ಮತ್ತು ಸ್ನಾಯು ನೋವು ಬರುವ ಸಾಧ್ಯತೆ ಇರುತ್ತದೆ. ಹೈಪೋಥೈರಾಯ್ಡಿಸಮ್​​ನಲ್ಲಿ ಚಯಾಪಚಯವು ನಿಧಾನಗೊಳ್ಳುತ್ತದೆ. ಥೈರಾಯ್ಡ್ ಹಾರ್ಮೋನುಗಳ ಪ್ರಮಾಣ ಕಡಿಮೆಯಿದ್ದರೆ, ದೇಹವು ಕೆಟ್ಟ ಕೊಲೆಸ್ಟ್ರಾಲ್​ನ್ನು ತೆಗೆದುಹಾಕಲು ವಿಫಲವಾಗುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

ಥೈರಾಯ್ಡ್ ಹಾರ್ಮೋನುಗಳ ಪ್ರಮಾಣ ದೇಹದಲ್ಲಿ ಕಡಿಯಮೆಯಾದರೆ, ದೇಹದಲ್ಲಿ ಕರುಳಿನ ಚಲನೆ ನಿಧಾನವಾಗಿ ಮಲಬದ್ಧತೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಅಲ್ಲದೇ ಹೈಪೋಥೈರಾಯ್ಡಿಸಮ್ ಕಡಿಮೆ ರಕ್ತದ ಪ್ರಮಾಣವನ್ನು ಉಂಟುಮಾಡುತ್ತದೆ. ಹೃದಯದ ಪಂಪ್ ಸಾಮರ್ಥ್ಯ ಕಡಿಮೆಯಾದಾಗ ಆಲಸ್ಯ ಉಂಟಾಗುತ್ತದೆ. ಹೃದಯ ಸ್ನಾಯುವಿನ ಸಂಕೋಚನಗಳು ದುರ್ಬಲಗೊಂಡು, ಹೃದಯ ಬಡಿತ ನಿಧಾನವಾಗುತ್ತದೆ. ಇವೆಲ್ಲವೂ ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಥೈರಾಯ್ಡ್ ಕಾರ್ಯವು ಕಡಿಮೆಯಾದರೆ, ಅದು ಖಿನ್ನತೆಗೆ ಕಾರಣವಾಗುತ್ತದೆ. ಕೆಲವರು ಭ್ರಮೆಗೆ ಗುರಿಯಾಗುತ್ತಾರೆ. ಇದು ಜ್ಞಾಪಕ ಶಕ್ತಿ ನಷ್ಟ, ಕಳಪೆ ಏಕಾಗ್ರತೆ ಮತ್ತು ಕಳಪೆ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಥೈರಾಯ್ಡ್ ಹಾರ್ಮೋನುಗಳು ಮೆದುಳಿನ ಕಾರ್ಯ, ಗ್ರಹಿಕೆ ಮತ್ತು ಮನಸ್ಥಿತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಕಡಿಮೆಯಾದರೆ ಅವುಗಳ ಕಾರ್ಯಕ್ಷಮತೆಯೂ ಬದಲಾಗುತ್ತದೆ. ಪ್ರಸ್ತುತ ಲೇಖನವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net