ಕೇವಲ 700 ರೂ.ಗಾಗಿ ವೃದ್ಧ ತಾಯಿಯನ್ನೇ ಹತ್ಯೆಗೈದ ಮಗ..!

money 1
ಸಾಂದರ್ಭಿಕ ಚಿತ್ರ
Published on

ರಾಂಚಿ: ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೇ ತನ್ನ ವೃದ್ಧ ತಾಯಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಝಾರ್ಖಂಡ್​ನ ರಾಂಚಿಯ ಬಳಿಯ ಕುಂತಿ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ವಾಟ್ಸ್‌ಆ್ಯಪ್‌ನಲ್ಲಿ ಹುಡುಗಿಯರ ಡಿಪಿ ನೋಡಿ ಅಪರಿಚಿರೊಂದಿಗೆ ಚಾಟ್​ ಮಾಡುವ ಮುನ್ನ ಇದನ್ನೊಮ್ಮೆ ಓದಿ..

ಮೃತಳನ್ನು ಕಲಾವತಿ ದೇವಿ(65) ಎಂದು ಗುರುತಿಸಲಾಗಿದೆ, ಆಕೆ ತನ್ನ ಪತಿ ನಿಧನದ ನಂತರ ಸಿಗುವ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದು, ಆಕೆಗೆ 4 ಗಂಡು ಮತ್ತು ಓರ್ವ ಹೆಣ್ಣು ಸೇರಿದಂತೆ ಒಟ್ಟು 5 ಮಕ್ಕಳಿದ್ದಾರೆ. ಕಲಾವತಿಯ 3 ಮಕ್ಕಳು ಉದ್ಯೋಗದ ನಿಮಿತ್ತ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದರೆ, ಚಿಕ್ಕ ಮಗ ಜಿತೇಂದ್ರ ಸಿಂಗ್ ಆಕೆಯೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದನು.

ಜೀತೆಂದ್ರ ಕುಡಿತದ ಚಟ ಹೊಂದಿದ್ದು, ಆಗಾಗ್ಗೆ ತನ್ನ ತಾಯಿ ಬಳಿ ಮದ್ಯ ಸೇವಿಸಲು ಹಣ ಕೇಳುತ್ತಿದ್ದ. ಹಣ ಸಿಗದಿದ್ದಾಗ ಥಳಿಸಿ ಆಕೆಯನ್ನು ನಿಂದಿಸುತ್ತಿದ್ದನು. ಘಟನೆ ನಡೆದ ದಿನ ಶನಿವಾರದಂದು ಜಿತೇಂದ್ರ ಮದ್ಯ ಸೇವಿಸಲು ತನ್ನ ತಾಯಿಗೆ 700 ರೂ. ಕೇಳಿದ್ದು, ಆಕೆ ನಿರಾಕರಿಸಿದ್ದಾಳೆ. ಈ ವೇಳೆ ಆತ ಕೋಪದ ಭರದಲ್ಲಿ ಮನೆಯಲ್ಲಿಟ್ಟಿದ್ದ ಕೋಲಿನಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಆ ಕ್ರೂರಿ ಮಗ ತಾಯಿಯ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾನೆ.

ಈ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತೋರ್ಪಾ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಜಿತೇಂದ್ರನನ್ನ ಬಂಧಿಸಿದ್ದಾರೆ. ಪೊಲೀಸರ ಎದುರೇ ತಾಯಿಯನ್ನು ಕೊಂದ ಅಪರಾಧವನ್ನು ಆರೋಪಿ ಮಗ ಒಪ್ಪಿಕೊಂಡಿದ್ದು, ಆತನನ್ನು ಗಲ್ಲಿಗೇರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net