ಕಿಮ್​ ಶರ್ಮ - ಲಿಯಾಂಡರ್​ ಪೇಸ್ ಪ್ರೇಮಸಂಬಂಧ ಜಗಜ್ಜಾಹೀರು!

kim
Published on

ಮುಂಬೈ: ಬಾಲಿವುಡ್​ ನಟಿ ಕಿಮ್​ ಶರ್ಮಾ ಅವರು ಟೆನ್ನಿಸ್​ ಪಟು ಲಿಯಾಂಡರ್​ ಪೇಸ್​ ಅವರೊಂದಿಗಿನ ತಮ್ಮ ಪ್ರೇಮಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪೇಸ್​ರೊಂದಿಗೆ ನಿಂತಿರುವ ತಮ್ಮ ಚಿತ್ರವೊಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಾಕಿರುವ ಶರ್ಮಾ, 'ಕಪಲ್​ ಇನ್​ ಲವ್'​ ಎಮೋಜಿಯೊಂದಿಗೆ ಶೇರ್​​ ಮಾಡಿದ್ದಾರೆ.

ಚಿತ್ರದಲ್ಲಿ ಪೇಸ್​ ತಮ್ಮೆಡೆಗೆ ಪ್ರೀತಿಯಿಂದ ನೋಡುತ್ತಿದ್ದರೆ, ಕಿಮ್​ ಶರ್ಮಾ ಕ್ಯಾಮೆರಾಗೆ ಮುಗುಳ್ನಗೆಯ ಪೋಸ್ ನೀಡಿದ್ದಾರೆ. ಇದೇ ಚಿತ್ರವನ್ನು ಪೇಸ್​ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, 'ಮ್ಯಾಜಿಕ್​' ಎಂದು ಬರೆದಿದ್ದಾರೆ.

ಮೊಹಬ್ಬತೇ ಚಿತ್ರದ ನಾಯಕಿಯರಲ್ಲೊಬ್ಬರಾಗಿದ್ದ 41 ವರ್ಷದ ಕಿಮ್​ ಶರ್ಮಾ ಮತ್ತು 48 ವರ್ಷದ ಗ್ರ್ಯಾಂಡ್​ ಸ್ಲಾಂ ಚ್ಯಾಂಪಿಯನ್​ ಲಿಯಾಂಡರ್​ ಪೇಸ್​ ಅವರು ಡೇಟ್​ ಮಾಡುತ್ತಿದ್ದಾರೆಂಬ ವದಂತಿಗಳು ಹಬ್ಬಿದ್ದವು. ಇದಕ್ಕೆ ಕಾರಣವೂ ಇತ್ತು - ಅದೆಂದರೆ ಇಬ್ಬರೂ ಕಳೆದ ಜುಲೈನಲ್ಲಿ ಗೋವಾದಲ್ಲಿ ಒಟ್ಟಿಗೆ ಹಾಲಿಡೇಗೆ ಹೋಗಿದ್ದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.

ಕಿಮ್​ ಶರ್ಮಾ ಈ ಮುನ್ನ ನಟ ಹರ್ಷವರ್ಧನ ರಾಣೆ ಅವರೊಂದಿಗೆ ರಿಲೇಷನ್​ಶಿಪ್​ ಹೊಂದಿದ್ದರೆ, ಪೇಸ್​ ಅವರು, ರೂಪದರ್ಶಿ ರಿಯಾ ಪಿಳ್ಳೈನ ಪತಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net