ಫೋಟೋ ಪೋಸ್​ ಕೊಟ್ಟು ಹೊರಟೇಬಿಟ್ಟ ಹಣಕಾಸು ಸಚಿವೆ!

fm
Published on

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಇಂಫೆಟ್ರಿ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆಯ ನೂತನ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದರು. ಶಾಸ್ತ್ರೋಕ್ತವಾಗಿ ನೆರವೇರಿದ ಗುದ್ದಲಿಪೂಜೆಯಲ್ಲಿ ಸಚಿವರೊಂದಿಗೆ ಹಿರಿಯ ಐಟಿ ಅಧಿಕಾರಿಗಳು ಭಾಗವಹಿಸಿದರು.

ತದನಂತರ ಸುದ್ದಿಗಾರರು ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಮಾತನಾಡಿಸಲು ಹೋದಾಗ, ಅವರು ಕೇವಲ ಫೋಟೋಗೆ ಪೋಸ್​ ಕೊಟ್ಟು ಹೊರಟೇಬಿಟ್ಟರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ಅವರು, ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಲು ಪತ್ರಕರ್ತರು ಗ್ಯಾಸ್, ಪೆಟ್ರೋಲ್ ಎಂದು ಕೂಗಿದ್ರೂ, ಕೇಳಿಸಿಕೊಳ್ಳದೇ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net