More

    ಪೂರ್ಣ ಲಸಿಕೀಕರಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ! ಎರಡೂ ಡೋಸ್​ ಪಡೆದ ಜನರೆಷ್ಟು?

    ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 1,11,57,883 ಜನರು ಎರಡೂ ಡೋಸ್​ ಕರೊನಾ ಲಸಿಕೆಗಳನ್ನು ಪಡೆದು ಕರೊನಾ ವಿರುದ್ಧ ಸುರಕ್ಷತೆಯನ್ನು ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯವು ದೇಶದಲ್ಲೇ 6ನೇ ಸ್ಥಾನವನ್ನು ಗಳಿಸಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್​ನಲ್ಲಿ ತಿಳಿಸಿದೆ.

    ದೇಶದಲ್ಲೇ ಅತಿಹೆಚ್ಚು ಪೂರ್ಣ ಲಸಿಕೀಕರಣವಾಗಿರುವ ರಾಜ್ಯವೆಂದರೆ ಮಹಾರಾಷ್ಟ್ರ. ಸೆಪ್ಟೆಂಬರ್​ 5 ರಂದು ಬೆಳಿಗ್ಗೆ 8 ಗಂಟೆಗೆ ಪ್ರಕಟವಾಗಿರುವ ಕೇಂದ್ರ ಸರ್ಕಾರದ ಕೋವಿನ್​ ಪಟ್ಟಿಯಲ್ಲಿ 2ನೇ ಡೋಸ್​ ಲಸಿಕೀಕರಣದ ಕೆಲವು ರಾಜ್ಯವಾರು ವಿವರಗಳು ಹೀಗಿವೆ:-

    ಮಹಾರಾಷ್ಟ್ರ: 1,71,90,818 ಜನರು
    ಉತ್ತರ ಪ್ರದೇಶ: 1,27,53,189 ಜನರು
    ಗುಜರಾತ್​: 1,25,24,914 ಜನರು
    ಪಶ್ಚಿಮ ಬಂಗಾಳ: 1,21,91,426 ಜನರು
    ರಾಜಸ್ಥಾನ: 1,14,83,961 ಜನರು
    ಕರ್ನಾಟಕ: 1,11,57,883 ಜನರು

    ಇದನ್ನೂ ಓದಿ: ಶಾಲೆಗಳನ್ನು ತೆರೆಯಬಹುದೇ? ಮಕ್ಕಳಿಗೆ ಲಸಿಕೆ ಸಿಗೋದು ಯಾವಾಗ? ಏಮ್ಸ್​ ನಿರ್ದೇಶಕರು ಏನು ಹೇಳಿದ್ದಾರೆ ಓದಿ

    ಈವರೆಗೆ ದೇಶಾದ್ಯಂತ 15,89,31,429 ಜನರು ಪೂರ್ಣ ಲಸಿಕೀಕರಣ ಹೊಂದಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 4,47,97,767 ಡೋಸ್​​ ಕರೊನಾ ಲಸಿಕೆಗಳನ್ನು ನೀಡಲಾಗಿದ್ದು, ಡೋಸ್​ಗಳ ವಿಷಯದಲ್ಲೂ ರಾಜ್ಯ ಆರನೇ ಸ್ಥಾನದಲ್ಲಿದೆ.

    ಒಂದೇ ಆಟದಲ್ಲಿ ಭಾರತಕ್ಕೆ ಎರಡು ಪದಕ! ಚಿನ್ನ ಗೆದ್ದ ಪ್ರಮೋದ್​ ಭಗತ್​​… ಕಂಚು ಗೆದ್ದ ಮನೋಜ್​ ಸರ್ಕಾರ್​!​

    ತಮಿಳು ಚಿತ್ರದ ಮಾದರಿಯಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಖದೀಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts