More

    ಶಾಲೆಗಳನ್ನು ತೆರೆಯಬಹುದೇ? ಮಕ್ಕಳಿಗೆ ಲಸಿಕೆ ಸಿಗೋದು ಯಾವಾಗ? ಏಮ್ಸ್​ ನಿರ್ದೇಶಕರು ಏನು ಹೇಳಿದ್ದಾರೆ ಓದಿ

    ನವದೆಹಲಿ: ಭಾರತದಲ್ಲಿ ಪ್ರಸ್ತುತ 12 ವರ್ಷ ಮೇಲ್ಪಟ್ಟವರಿಗೆ ಕೇವಲ ಒಂದು ಕರೊನಾ ಲಸಿಕೆಗೆ ಅನುಮೋದನೆ ಸಿಕ್ಕಿದ್ದು, ಇನ್ನೂ ಮಕ್ಕಳಿಗೆ ಕರೊನಾ ಲಸಿಕಾ ಅಭಿಯಾನ ಘೋಷಿಸಲಾಗಿಲ್ಲ. ಹೀಗಿರುವಾಗಲೇ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಕ್ಕಳಿಗೆ ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಸರ್ಕಾರಗಳು ತೆಗೆದುಕೊಳ್ಳುತ್ತಿವೆ.

    ಈ ಬಗ್ಗೆ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ದೆಹಲಿಯ ಏಮ್ಸ್​ ನಿರ್ದೇಶಕರಾದ ಡಾ. ರಣದೀಪ್​ ಗುಲೇರಿಯಾ ಅವರು ಶಾಲೆಗಳ ಪುನರಾರಂಭವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಮಕ್ಕಳಿಗೆ ಕರೊನಾ ಲಸಿಕೆ ನೀಡಲು ಇನ್ನೂ 9 ತಿಂಗಳು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಶಾಲೆಗಳನ್ನು ಮುಚ್ಚಿರಲು ಸಾಧ್ಯವಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಕರೊನಾ: ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇಕಡ 12 ಏರಿಕೆ! ಕೇರಳದಲ್ಲಿ 32,803 ಹೊಸ ಕೇಸು

    ದಿನನಿತ್ಯ 30,000 ಕ್ಕೂ ಹೆಚ್ಚು ಕರೊನಾ ಪ್ರಕರಣಗಳು ವರದಿಯಾಗುತ್ತಿರುವ ಕೇರಳದಲ್ಲಿ ಶಾಲೆಗಳನ್ನು ಆರಂಭಿಸಬಾರದು. ಆದರೆ ಪಾಸಿಟಿವಿಟಿ ದರ ಕಡಿಮೆ ಇರುವ ದೆಹಲಿಯಂಥ ಕಡೆಗಳಲ್ಲಿ ಶಾಲೆಗಳನ್ನು ಆರಂಭಿಸಲು ಇದು ಸೂಕ್ತ ಸಮಯ ಎಂದು ಡಾ.ಗುಲೇರಿಯ ಹೇಳಿದ್ದಾರೆ. “ನಾನು ಶಾಲೆಗಳನ್ನು ಮತ್ತೆ ತೆರೆಯುವುದನ್ನು ಬೆಂಬಲಿಸುತ್ತೇನೆ. ಏಕೆಂದರೆ, ಮಕ್ಕಳಿಗೆ ಭೌತಿಕ ವಿಚಾರವಿನಿಮಯ ಬಹಳ ಮಹತ್ವದ್ದಾಗಿದೆ. ಅದೂ ಅಲ್ಲದೆ ಬಹಳ ಮಕ್ಕಳಿಗೆ ಆನ್​ಲೈನ್​ ಶಿಕ್ಷಣವನ್ನು ಪಡೆಯುವ ಸೌಲಭ್ಯ ಇಲ್ಲವಾಗಿದೆ” ಎಂದಿದ್ದಾರೆ.

    ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಳಿದ್ದಕ್ಕೆ, “ಎಲ್ಲಾ ಸಿಬ್ಬಂದಿಗಳಿಗೂ ಲಸಿಕೆ ನೀಡಿರಬೇಕು. ಮಕ್ಕಳು ಶಾಲೆಯನ್ನು ಪ್ರವೇಶಿಸುವಾಗ ಅಥವಾ ಶಾಲೆಯಿಂದ ಮನೆಗೆ ಹೊರಡುವಾಗ ಮತ್ತು ಊಟದ ಬ್ರೇಕ್​ನ ಸಮಯದಲ್ಲಿ ಜನಜಂಗುಳಿ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಶಾಲೆಯಲ್ಲಿ ಕರೊನಾ ಕೇಸುಗಳು ವರದಿಯಾದಲ್ಲಿ ಅದನ್ನು ಕೂಡಲೇ ಮುಚ್ಚಬೇಕು” ಎಂದು ಡಾ.ಗುಲೇರಿಯಾ ಹೇಳಿದ್ದಾರೆ. (ಏಜೆನ್ಸೀಸ್)

    VIDEO| ತಾಲಿಬಾನ್​ ವಾಪಸಾತಿಯನ್ನು ಸಂಭ್ರಮಿಸುವ ಮಂದಿಗೆ ನಟ ನಸೀರುದ್ದಿನ್​ ಶಾಹ್​ ಹೇಳಿದ್ದಿಷ್ಟು!

    ಕಾಜಿರಂಗ ಉದ್ಯಾನ: ಪ್ರವಾಹಕ್ಕೆ ಸಿಲುಕಿದ್ದ ಪುಟ್ಟ ಘೇಂಡಾಮೃಗದ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts