More

    VIDEO| ತಾಲಿಬಾನ್​ ವಾಪಸಾತಿಯನ್ನು ಸಂಭ್ರಮಿಸುವ ಮಂದಿಗೆ ನಟ ನಸೀರುದ್ದಿನ್​ ಶಾಹ್​ ಹೇಳಿದ್ದಿಷ್ಟು!

    ನವದೆಹಲಿ: ಕೆಲವು ಭಾರತೀಯ ಮುಸಲ್ಮಾನರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ವಾಪಸಾತಿಯ ಬಗ್ಗೆ ಸಂತಸ ಪಡುತ್ತಿರುವುದು ಚಿಂತಾಚನಕವಾಗಿದೆ. ಇಂದು ಪ್ರತಿಯೊಬ್ಬ ಹಿಂದೂಸ್ತಾನಿ ಮುಸಲ್ಮಾನರೂ ತಾವು ಆಧುನಿಕ ಧರ್ಮಾಚರಣೆ ಬಯಸುತ್ತಾರೋ, ಹಳೇ ಕಾಲದ ಅನಾಗರಿಕತೆಯನ್ನು ಬಯಸುತ್ತಾರೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ಹಿರಿಯ ನಟ ನಸೀರುದ್ದೀನ್ ಶಾಹ್​ ಹೇಳಿದ್ದಾರೆ.

    ನಿನ್ನೆ ರಾತ್ರಿ ಆರ್​ಜೆ ಸಯೇಮಾ ಅವರು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿರುವ ವೀಡಿಯೋ ಸಂದೇಶದಲ್ಲಿ, ನಸೀರುದ್ದಿನ್ ಅವರು, “ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಳ್ವಿಕೆ ವಾಪಸ್ಸಾಗಿರುವುದು ಇಡೀ ಜಗತ್ತಿಗೆ ಆತಂಕದ ವಿಷಯವಾಗಿರುವುದು ಸರಿಯಷ್ಟೆ. ಆದರೆ ಅದರಷ್ಟೇ ಅಪಾಯಕಾರಿ ವಿಷಯವೆಂದರೆ ಭಾರತದ ಮುಸಲ್ಮಾನರಲ್ಲಿ ಕೆಲವರು ತಾಲಿಬಾನ್​ ಗೆಲುವಿನ ಬಗ್ಗೆ ಸಂಭ್ರಮ ಆಚರಿಸುತ್ತಿರುವುದು” ಎಂದಿದ್ದಾರೆ.

    ಹಿಂದೂಸ್ತಾನಿ ಮುಸಲ್ಮಾನರು ತಮ್ಮ ಸುಧಾರಿತ ಆಧುನಿಕ ಧರ್ಮವನ್ನು ಪಾಲಿಸಲು ಇಚ್ಛಿಸುತ್ತಾರೋ ಅಥವಾ ಶತಮಾನಗಳ ಹಿಂದಿನ ಹಿಂಸಾತ್ಮಕ ಅನಾರಿಕತೆಯನ್ನು ಬಯಸುತ್ತಾರೋ ಎಂದು ಚಿಂತಿಸಬೇಕಿದೆ. ‘ನಾನು ಹಿಂದೂಸ್ತಾನಿ ಮುಸಲ್ಮಾನ’ ಎಂದು ಮಿರ್ಜಾ ಗಾಲಿಬ್​ರ ಪದ್ಯವೊಂದನ್ನು ಉಲ್ಲೇಖಿಸಿರುವ 71 ವರ್ಷ ವಯಸ್ಸಿನ ನಸಿರುದ್ದೀನ್​ ಶಾಹ್​, ‘ಹಿಂದೂಸ್ತಾನಿ ಇಸ್ಲಾಂ’ಗೂ ಬೇರೆ ದೇಶಗಳಲ್ಲಿ ಅಭ್ಯಾಸದಲ್ಲಿರುವ ಇಸ್ಲಾಂಗೂ ವ್ಯತ್ಯಾಸವಿದೆ ಎಂದಿದ್ದಾರೆ. “ನಮ್ಮ ಧರ್ಮದಲ್ಲಿ ನಾವೇ ಗುರುತಿಸಲಾಗದಷ್ಟು ಬದಲಾವಣೆಗಳಾಗುವ ಸಮಯವನ್ನು ದೇವರು ತರದಿರಲಿ” ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ತಾಲಿಬಾನ್​​ಗೆ ಶುಭಾಶಯ ಕೋರಿದ ಅಲ್​ಖೈದಾ! ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟ ಆತಂಕವಾದಿಗಳು!

    ಕರೊನಾ: ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇಕಡ 12 ಏರಿಕೆ! ಕೇರಳದಲ್ಲಿ 32,803 ಹೊಸ ಕೇಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts