ತಾಲಿಬಾನ್​​ಗೆ ಶುಭಾಶಯ ಕೋರಿದ ಅಲ್​ಖೈದಾ! ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟ ಆತಂಕವಾದಿಗಳು!

taliban1
Published on

ನವದೆಹಲಿ​​: ವರ್ಷಗಳ ಹಿಂದೆ ಅಮೆರಿಕದ ಮೇಲೆ ನಡೆದಿದ್ದ 9/11 ಉಗ್ರರ ದಾಳಿಯ ಮಾಸ್ಟರ್​ಮೈಂಡ್​ ಆದ ಅಲ್​ಖೈದಾ ಆತಂಕವಾದಿಗಳ ಸಂಘಟನೆಯು ಅಫ್ಘಾನಿಸ್ತಾನದ 'ವಿಮುಕ್ತಿ'ಗಾಗಿ ತಾಲಿಬಾನ್​ಗೆ ಶುಭಾಶಯ ಕೋರಿದೆ. ಜೊತೆಯಲ್ಲೇ, ಭಾರತದ ಕಾಶ್ಮೀರವನ್ನೂ 'ಇಸ್ಲಾಂನ ಶತೃಗಳ ಹಿಡಿತದಿಂದ ಮುಕ್ತಗೊಳಿಸಿ' ಎಂದು ಕರೆ ನೀಡಿದೆ.

ತಾಲಿಬಾನ್​ ಆಕ್ರಮಿತ ಅಫ್ಘಾನಿಸ್ತಾನದಿಂದ ಅಮೆರಿಕದ ಸೇನಾ ಪಡೆಗಳು ಅಂತಿಮ ನಿರ್ಗಮನ ಮಾಡಿದ ನಂತರ, ಅಲ್​ಖೈದಾ ಈ ಹೇಳಿಕೆ ನೀಡಿದೆ. "ಇಸ್ಲಾಂನ ಶತೃಗಳ ಹಿಡಿತದಿಂದ ಲೆವಂತ್​, ಸೊಮಾಲಿಯ, ಯೆಮೆನ್​, ಕಾಶ್ಮೀರ ಮತ್ತು ಉಳಿದ ಇಸ್ಲಾಮೀಯ ಭೂಪ್ರದೇಶಗಳನ್ನು ಮುಕ್ತಗೊಳಿಸಿ. ಓಹ್​ ಅಲ್ಲಾ, ಜಗತ್ತಿನಾದ್ಯಂತದ ಮುಸಲ್ಮಾನ ಖೈದಿಗಳಿಗೆ ಸ್ವಾತಂತ್ರ್ಯ ಕರುಣಿಸು" ಎಂದು ಅಲ್​ಖೈದಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಆಗಸ್ಟ್​ 30 ರಂದು ಮಧ್ಯರಾತ್ರಿ ಅಮೆರಿಕದ ಸೈನಿಕರನ್ನು ಹೊತ್ತ ಸಿ-17 ಕಾರ್ಗೋ ಏರ್​ಕ್ರಾಫ್ಟ್​ ಕಾಬುಲ್​ನ ಹಮೀದ್​ ಕರ್ಜಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ತನ್ಮೂಲಕ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಯುದ್ಧಕ್ಕೆ ಜೋ ಬಿಡೆನ್ ನೇತೃತ್ವದ ಸರ್ಕಾರ ಅಂತ್ಯ ಹಾಡಿತು. ಇದಾದ ನಂತರ ಅಫ್ಘಾನಿಸ್ತಾನ ಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ತಾಲಿಬಾನ್​ ಘೋಷಣೆ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net