ಮನೆಯ ಬಳಿ ಆಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ!

a
Published on

ನವದೆಹಲಿ: ಕಾಮಾಂಧನೊಬ್ಬ 4 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ದೆಹಲಿಯಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಆರೋಪಿಯನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ದೆಹಲಿಯ ಬಾಪಾ ನಗರ ಪ್ರದೇಶದಲ್ಲಿ ಕಳೆದ ವಾರ ಮಗುವೊಂದು ಮನೆಯ ಹತ್ತಿರ ಆಡುತ್ತಿದ್ದಾಗ, ಹತ್ತಿರದ ಜೀನ್ಸ್​ ಉತ್ಪಾದಿಸುವ ಕಾರ್ಖಾನೆಯ 25 ವರ್ಷ ವಯಸ್ಸಿನ ಕಾರ್ಮಿಕ ಈ ಕೃತ್ಯ ಎಸಗಿದ್ದಾನೆ. ಮಗುವಿಗೆ ಸಿಹಿತಿಂಡಿ ನೀಡುವುದಾಗಿ ಆಸೆ ತೋರಿಸಿ, ಒಳಗೆ ಕರೆದುಕೊಂಡು ಹೋಗಿ ಲೈಂಗಿಕ ಶೋಷಣೆ ಮಾಡಿದ್ದಾನೆ ಎನ್ನಲಾಗಿದೆ.

ಮನೆಗೆ ಹೋದ ಮಗುವು ಈ ವಿಷಯವನ್ನು ಪಾಲಕರಿಗೆ ತಿಳಿಸಿದ ನಂತರ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸಂತ್ರಸ್ತ ಮಗುವಿನ ಕುಟುಂಬದವರು ಮತ್ತು ಸ್ಥಳೀಯರು ಜೀನ್ಸ್​ ಫ್ಯಾಕ್ಟರಿಗೆ ಹೋಗಿ ಆರೋಪಿಯನ್ನು ಚೆನ್ನಾಗಿ ಥಳಿಸಿದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೋಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net