ಹನೂರು: ತಾಲೂಕಿನ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ರಘು ಅವರು ವಾರ್ಗವಣೆಯಾದ ಹಿನ್ನೆಲೆ ಮಂಗಳವಾರ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಕಳೆದ ವರ್ಷ ಮೇ 28ರಂದು ಪಟ್ಟಣದಲ್ಲಿ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ಸಂಚಾರಿ ನ್ಯಾಯಾಲಯವನ್ನು ತೆರೆಯಲಾಗಿದ್ದು, ರಘು ಅವರು ಪ್ರಥಮ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮೈಸೂರಿಗೆ ವರ್ಗಾವಣೆಯಾಗಿರುವ ಹಿನ್ನೆಲೆ ಅವರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಆಡಳಿತ ಮಂಡಳಿ ಕಚೇರಿಗೆ ತೆರಳಿದ ಅವರನ್ನು ಕಾರ್ಯದರ್ಶಿ ಲಿಂಗರಾಜು ಅವರು ಶಾಲು, ಹಾರ ಹಾಕಿ ಗೌರವಿಸಿದರು. ಈ ವೇಳೆ ದೇಗುಲದ ಅರ್ಚಕರಾದ ಅರುಣ್‌ರಾವ್ ಸಿಂಧೆ ಹಾಗೂ ಜಯಂತ್‌ರಾವ್ ಸಿಂಧೆ ಇದ್ದರು.