ಈ ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತಿದ್ದೀರಾ? ಹಾಗಾದ್ರೆ ಕಿಡ್ನಿ ಸ್ಟೋನ್ಸ್ ಉಂಟಾಗಬಹುದು ಎಚ್ಚರ! Kidney Stones

Kidney Stones
Published on

Kidney Stones : ಮೂತ್ರಪಿಂಡದ ಕಲ್ಲುಗಳನ್ನು ಬಹಳ ಗಂಭೀರ ಕಾಯಿಲೆ ಎಂದು ಪರಿಗಣಿಸಬಹುದು. ಕಿಡ್ನಿ ಸ್ಟೋನ್​ ನೋವು ಹೇಗಿರುತ್ತದೆ ಎಂದು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್​ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿ ಮತ್ತು ನಾವು ಸೇವಿಸುವ ಆಹಾರ.

ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ದೂರವಿರಲು, ನಾವು ಸಾಕಷ್ಟು ನೀರು ಕುಡಿಯುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆದಾಗ್ಯೂ, ಕೆಲವು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಿಡ್ನಿ ಸ್ಟೋನ್​ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಆ ತರಕಾರಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಲೆಟಿಸ್

ಲೆಟಿಸ್​ ತರಕಾರಿ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ, ಹೆಚ್ಚು ತಿನ್ನುವುದು ಒಳ್ಳೆಯದಲ್ಲ. ಲೆಟಿಸ್​ನಲ್ಲಿ ಆಕ್ಸಲೇಟ್ ಅಧಿಕವಾಗಿರುತ್ತದೆ. ಈ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಲು ಕಾರಣವಾಗಬಹುದು. ಆದ್ದರಿಂದ, ಈಗಾಗಲೇ ಕಿಡ್ನಿ ಸ್ಟೋನ್​ ಇರುವವರು ಅಥವಾ ಅದರ ಬಗ್ಗೆ ಹೆಚ್ಚು ಜಾಗರೂಕರಾಗಿರುವವರು ಲೆಟಿಸ್​ ಅನ್ನು ಮಿತವಾಗಿ ತಿನ್ನುವುದು ಉತ್ತಮ.

ಬದನೆಕಾಯಿ

ಬದನೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದಾಗ್ಯೂ ಇವುಗಳ ಜೊತೆಗೆ, ಬದನೆಕಾಯಿಯಲ್ಲಿ ಆಕ್ಸಲೇಟ್ ಕೂಡ ಅಧಿಕವಾಗಿರುತ್ತದೆ. ಬದನೆಕಾಯಿ ಬೀಜಗಳಲ್ಲಿ ವಿಶೇಷವಾಗಿ ಆಕ್ಸಲೇಟ್ ಹೆಚ್ಚಾಗಿರುತ್ತದೆ. ಆದ್ದರಿಂದ, ಹೆಚ್ಚು ಬದನೆಕಾಯಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ.

ಟೊಮ್ಯಾಟೋ

ನಾವು ದಿನನಿತ್ಯದ ಊಟದಲ್ಲಿ ಬಳಸುವ ಟೊಮ್ಯಾಟೋದಲ್ಲಿ ಆಕ್ಸಲೇಟ್ ಅಧಿಕವಾಗಿರುತ್ತದೆ. ವಿಶೇಷವಾಗಿ ಟೊಮ್ಯಾಟೋ ಬೀಜಗಳಲ್ಲಿ ಇದು ಅಧಿಕವಾಗಿರುತ್ತದೆ. ಪ್ರತಿದಿನ ಹೆಚ್ಚು ಟೊಮ್ಯಾಟೋ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು.

ಸೌತೆಕಾಯಿ

ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಸುವ ಸೌತೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು. ಅವುಗಳ ಬೀಜಗಳಲ್ಲಿ ಹೆಚ್ಚಿನ ಆಕ್ಸಲೇಟ್ ಅಂಶವಿರುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಆಲೂಗಡ್ಡೆ, ಸೋಯಾಬೀನ್

ನ್ಯಾಷನಲ್ ಕಿಡ್ನಿ ಫೌಂಡೇಶನ್ ವರದಿಯ ಪ್ರಕಾರ, ಪ್ರತಿದಿನ ಸೇವಿಸುವ ಕೆಲವು ತರಕಾರಿಗಳು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಅಂತಹ ತರಕಾರಿಗಳಲ್ಲಿ ಆಲೂಗಡ್ಡೆ ಮತ್ತು ಸೋಯಾಬೀನ್ ಕೂಡ ಸೇರಿವೆ. ಇವುಗಳನ್ನು ಹೆಚ್ಚು ತಿನ್ನುವುದು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಈಗಾಗಲೇ ಕಿಡ್ನಿ ಸ್ಟೋನ್​ ಸಮಸ್ಯೆ ಇರುವವರು ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net