‘ವಿಕ್ರಾಂತ್ ರೋಣ’ ಚಿತ್ರದ ನೃತ್ಯ ನಿರ್ದೇಶಕರಾದ ಜಾನಿ ಮಾಸ್ಟರ್ಗೆ ಸುದೀಪ್ ಮಹಿಂದ್ರಾ ಥಾರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಫೋಟೋ ಹಂಚಿಕೊಂಡಿರುವ ಜಾನಿ ಮಾಸ್ಟರ್ ಅವರು ಕಿಚ್ಚ ಸುದೀಪ್ಗೆ ಧನ್ಯವಾದ ಹೇಳಿದ್ದಾರೆ. ಸದ್ಯ, ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಅಂದಹಾಗೆ, ಜಾನಿ ಮಾಸ್ಟರ್ ಅವರು ತಮಿಳು, ತೆಲುಗು ಚಿತ್ರರಂಗಳಲ್ಲಿ ಹೆಚ್ಚು ಹೆಸರು ಮಾಡಿದರೂ, ಕನ್ನಡ ಚಿತ್ರರಂಗದ ಜತೆಗೆ ಕೂಡಾ ಅವರಿಗೆ ಒಳ್ಳೆಯ ನಂಟಿದೆ. ಪುನೀತ್ ಅವರ ನಟನೆಯ ‘ರಾಜಕುಮಾರ’, ‘ನಟಸಾರ್ವಭೌಮ’, ‘ಯುವರತ್ನ’ ಸಿನಿಮಾದ ಕೆಲ ಹಾಡುಗಳಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಟಾಲಿವುಡ್ನ 'ಬುಟ್ಟ ಬೊಮ್ಮಾ' ಜತೆಗೆ ಹಲವು ಸೂಪರ್ ಹಿಟ್ ಹಾಡುಗಳಿಗೆ ಜಾನಿ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.