ಟಾಲಿವುಡ್‌ನ ಖ್ಯಾತ ಜೋಡಿಗಳಲ್ಲಿ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಸಮಂತಾ ರುತ್ ಪ್ರಭು ಅವರು ಒಂದಾಗಿದ್ದರು. ಒಟ್ಟಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟು, ಪ್ರೀತಿಯಲ್ಲಿ ಬಿದ್ದು, ನಂತರ ಮದುವೆಯೂ ಆಗಿದ್ದರು. ಆದರೆ, ಸಮಂತಾ ಅವರು ನಾಗಚೈತನ್ಯಾ ಜೊತೆ ಡಿವೋರ್ಸ್ ಪಡೆದ ಬಳಿಕ ಅವರ ಜೀವನದಲ್ಲಿ ಎಲ್ಲವೂ ಬದಲಾಗಿದೆ. ಇನ್ನು, ಈ ಮುದ್ದಾದ ಜೋಡಿಯ ಡಿವೋರ್ಸ್ನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿತ್ತು. ಈ ಜೋಡಿಗೆ ಹತ್ತಿರವಾದವದಿಂದ ಅವರ ಡಿವೋರ್ಸ್‌ಗೆ ಅನೇಕ ಕಾರಣಗಳು ಇವೆ ಎಂದು ಕೇಳಿಬಂತು. ಆ ಹಲವು ಕಾರಣಗಳ ಪೈಕಿ ಸದ್ಯ ಒಂದು ಕಾರಣ ಪ್ರಮುಖವಾಗಿ ಕೇಳಿ ಬರುತ್ತಿದೆ. ಅದು, ಸಮಂತಾ ಮತ್ತು ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ನಡುವೆ ಇರುವ ಸಂಬಂಧ. ಹೌದು, ಇತ್ತೀಚಿನ ದಿನಗಳಲ್ಲಿ ಸಮಂತಾ ಜತೆಗೆ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಹೆಸರು ಸಿಕ್ಕಾಪಟ್ಟೆ ಹೆಚ್ಚಾಗಿ ಕೇಳಿಬರುತ್ತಿದೆ.
ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್‌ಗೆ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಕಾರಣ ಎಂದು ಹಲವು ಭಾರಿ ಕೇಳಿಬಂದಿದೆ. ಅವರಿಬ್ಬರ ನಡುವೆ ಇದ್ದ ಸ್ನೇಹವೇ ಟಾಲಿವುಡ್‌ನ ಈ ಕಪಲ್ ದೂರವಾಗಲು ಕಾರಣ ಎಂದು ಹೇಳಲಾಗಿತ್ತು. ಇದಕ್ಕೆ ಉದಾಹರಣೆಯಾಗಿ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಸಮಂತಾ ಮತ್ತು ಅವರ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆ ಇರುವ ಫೋಟೋಗಳು, ಪ್ರೀತಂ ಹುಟ್ಟುಹಬ್ಬದ ದಿನ ಸಮಂತಾ ಒಂದು ಫೋಟೊಶೇರ್ ಮಾಡಿ ಅವರಿಗೆ ವಿಶ್ ಮಾಡಿದ ಪರಿ, ಎಲ್ಲವನ್ನು ನೆಟ್ಟಿಗರು ಗಮನಿಸುತ್ತಿದ್ದರು. ಅದರಲ್ಲಿಯೂ, ಒಂದು ಫೋಟೋದಲ್ಲಿ ಸಮಂತಾ ಮತ್ತು ಪ್ರೀತಂ ಬಹಳ ಸಲುಗೆಯಿಂದ ಇದ್ದಂತೆ ಕಾಣುತ್ತಿತ್ತು. ಇದರಿಂದಾಗಿ, ನಟಿ ಸಮಂತಾ ಹಿಗ್ಗಾ-ಮುಗ್ಗಾ ಟ್ರೋಲ್ ಸಹ ಆಗಿದ್ದರು. ಆ ಫೋಟೋಗಳು ಮತ್ತು ಒಂದು ವಿಡಿಯೋ ಕಂಡ ನೆಟ್ಟಿಗರು ಸ್ಯಾಮ್ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರು. ಆಗ ಸಮಂತಾ ಒಂದು ಫೋಟೋವನ್ನು ಡಿಲೀಟ್ ಕೂಡಾ ಮಾಡಿದ್ದರು.