blank

ಹೀರೋ ರೋಲ್​​ನಿಂದ ಕೆಳಗಿಳಿದ ಬಳಿಕ ನನ್ನ ಕೆಲಸ..; ಅಭಿನಯ ಚಕ್ರವರ್ತಿ ಸುದೀಪ್​ ಹೇಳಿದ್ದೇನು? | Kiccha Sudeep

blank

ಬೆಂಗಳೂರು: ಕಿಚ್ಚ ಸುದೀಪ್​​(Kiccha Sudeep) ಮ್ಯಾಕ್ಸ್​​ ಸಿನಿಮಾ ಗೆದ್ದ ಸಂಭ್ರಮದಲ್ಲಿದ್ದಾರೆ. ಕಳೆದ 28 ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ಅಭಿನಯ ಚಕ್ರವರ್ತಿ ಸ್ಟಾರ್​​ಡಮ್​ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇನಿಲ್ಲ. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇದನ್ನು ಓದಿ: ಬೋಲ್ಡ್​ ಇಮೇಜ್​ ಕಾರಣಕ್ಕೆ ತೃಪ್ತಿ ದಿಮ್ರಿಯನ್ನು ‘ಆಶಿಕಿ 3’ ತೆಗೆದುಹಾಕಿಲ್ಲ; ನಿರ್ದೇಶಕ ಅನುರಾಗ್ ಬಸು ಕೊಟ್ಟ ಸ್ಪಷ್ಟನೆ ಹೀಗಿದೆ.. | Triptii Dimri

51ರ ಹರೆಯದಲ್ಲೂ ಸುದೀಪ್​​​ ಇಂದಿಗೂ ಬೇಡಿಕೆಯ ನಟನಾಗಿ ಸಿನಿಮಾರಂಗದಲ್ಲಿ ನೆಲೆನಿಂತಿದ್ದಾರೆ. ಪ್ರತಿ ಬಾರಿಯೂ ಯಾವುದೇ ಹಿಂಜರಿಕೆ ಇಲ್ಲದೆ, ತಮ್ಮ ಅಭಿಪ್ರಾಯವನ್ನು ದಿಟ್ಟವಾಗಿ ಪ್ರಸ್ತುತ ಪಡಿಸುವ ಸುದೀಪ್​​​​​ ಚಿತ್ರರಂಗದಿಂದ ತಮ್ಮ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಎಲ್ಲಾ ಹೀರೋಗೂ ಒಂದು ಟೈಮ್ ಲೈನ್ ಅಂತ ಇರುತ್ತದೆ. ಕೊನೆಗೆ ಅವರು ಬೋರ್ ಆಗಿಬಿಡುತ್ತಾರೆ ಅಂತ ರಿಟೈರ್‌ಮೆಂಟ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಸುದೀಪ್​​ ಅವರಿಗೆ, ಮ್ಯಾಕ್ಸ್​​​ ಸಿನಿಮಾ ನೋಡಿದಾಗ ಇಡೀ ಚಿತ್ರ ನಿಮ್ಮ ಹೆಗಲ ಮೇಲೆ ಇರುವಂತೆ ಭಾಸವಾಗುತ್ತಿತ್ತು. ನೀವೇ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೀರಿ ಅಂಥ ಅನ್ನಿಸುತ್ತಿತ್ತು ಈ ಬಗ್ಗೆ ನೀವೇನು ಹೇಳುತ್ತೀರಾ ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಕಿಚ್ಚ, ನಾನು ನನ್ನ ಲೈಫ್‌ ಮತ್ತು ಕೆರಿಯರ್‌ ಅನ್ನು ಭುಜದ ಮೇಲೆ ಎತ್ತಿಕೊಂಡು ಬಂದಿದ್ದೇನೆ. ಅದರ ಮುಂದೆ ಒಂದು ಸಿನಿಮಾ ಚಿಕ್ಕದು. ನನಗೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಎಂದರೆ ಇಷ್ಟ. ನಾವು ಬೆಳದು ಬಂದಾಗ ಗಾಡ್‌ ಫಾದರ್​ಗಳನ್ನು ಇಟ್ಟುಕೊಂಡು ಬಂದಿಲ್ಲ. ನನ್ನ ಜವಾಬ್ದಾರಿ ನಾನೇ ತೆಗೆದುಕೊಂಡಿದ್ದೇನೆ. ನನ್ನ ಸಿನಿಮಾ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಇನ್ನೊಬ್ಬರು ಸರ್ಪೊರ್ಟ್‌ ಇದ್ರೆ ಒಳ್ಳೆಯದು. ಯಾರು ಇಲ್ಲದಿದ್ದಾಗ ನಮ್ಮ ಗಾಡಿ ಓಡಲೇಬೇಕು. ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಬಿಗ್‌ ಬಾಸ್‌, ಸಿನಿಮಾ ಹಾಗೂ ಕ್ರಿಕೆಟ್‌ ಈ ಮೂರನ್ನು ಹೇಗೆ ಸರಿದೂಗಿಸುತ್ತೀರಿ ಎಂದು ಸುದೀಪ್​ ಅವರನ್ನು ಕೇಳಿದಾಗ, ಮ್ಯಾಕ್ಸ್‌ ಕೂಡ ನನ್ನ ಆಯ್ಕೆ ಆಗಿತ್ತು. ಸಿಸಿಎಲ್‌, ಕೆಸಿಸಿ ಹಾಗೂ ಬಿಗ್​​ಬಾಸ್‌ ಕೂಡ ನನ್ನದೇ ಆಯ್ಕೆ ಆಗಿತ್ತು. ಎಲ್ಲವೂ ನನ್ನದೇ ಆಯ್ಕೆ ಆಗಿದ್ದರಿಂದ ಅದರಲ್ಲಿ ಯಾವ ವಿಷಾದವೂ ಇರಲಿಲ್ಲ. ದೈಹಿಕವಾಗಿ ಸುಸ್ತು ಆಗುತ್ತಾ ಇದ್ದೆ. ಮಾನಸಿಕವಾಗಿ ಅಲ್ಲ. ದೈಹಿಕವಾಗಿ ಸುಸ್ತು ಆದಾಗ ಒಂದು ಸ್ವಲ್ಪ ಹೊತ್ತು ಮಲಗಿದ್ರೆ ಸರಿ ಆಗ್ತಾ ಇತ್ತು. ನಾನು ಎಲ್ಲ ಕೆಲಸವನ್ನು ತುಂಬಾ ಖುಷಿಯಿಂದಲೇ ಮಾಡುತ್ತೇನೆ.

ನನಗೆ ಖಾಲಿ ಕೂರುವುದು ಅಂದ್ರೆ ಆಗಲ್ಲ. ಸದಾ ಏನಾದ್ರು ಮಾಡ್ತಾ ಇರಬೇಕು. ನಮಗೆಲ್ಲರಿಗೂ ವಿಶ್ರಾಂತಿ ಬೇಕು. ಹೊಟ್ಟೆ ಇದೆ ಅಂತಾ ಸಿಕ್ಕಾಪಟ್ಟೆ ತಿನ್ನೋನಲ್ಲ. ನಿದ್ದೆ ಮಾಡೋಕೆ ಹಾಸಿಗೆ ಇದೆ ಅಂತ ಸುಮ್ನೆ ನಿದ್ದೆ ಮಾಡೋನಲ್ಲ. ರಿಟೈರ್‌ಮೆಂಟ್ ಆದ ಮೇಲೆ ರೆಸ್ಟ್ ಇದ್ದೇ ಇರುತ್ತೆ ಅಲ್ವಾ? ಅಲ್ಲಿಯವರೆಗೂ ಯಾಕೆ ರಿಟೈರ್ ಆಗಬೇಕು. ಕೆಲಸ ಮಾಡೋಣ ಎಂದು ಹೇಳಿದ್ದಾರೆ.

ಇನ್ನು ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ ಸುದೀಪ್, ಪ್ರತಿ ನಾಯಕನೂ ಕೊನೆಯಲ್ಲಿ ಬೋರ್‌ ಆಗಲು ಶುರುವಾಗುತ್ತಾನೆ. ಹೀರೋ ಆಗಿ ಪ್ರತಿಯೊಬ್ಬರಿಗೂ ಟೈಮ್‌ ಲೈನ್‌ ಇರುತ್ತದೆ. ನಮ್ಮಂಥವರಿಗೆ ಅಣ್ಣ, ತಮ್ಮ, ಚಿಕ್ಕಪ್ಪನ ರೋಲ್‌ ಎಲ್ಲ ಸೂಟ್‌ ಆಗಲ್ಲ ಅದನ್ನು ನಾವು ಮಾಡೋದು ಇಲ್ಲ. ನಾವು ಜೀವನದಲ್ಲಿ ಏನಾದರೂ ಹೊಸತನ್ನು ಮಾಡುವುದನ್ನು ಹುಡುಕಬೇಕು. ನಾನು ಹೀರೋ ಆಗಿ ಸೆಟ್‌ಗೆ ಹೋಗಬೇಕಾದಾಗ ನಾನು ಯಾರನ್ನು ಕಾಯಿಸುವುದಿಲ್ಲ.

ಹೀರೋಯಿಂದ ಕೆಳಗೆ ಇಳಿದ ಮೇಲೆ ಬೇರೆ ಪಾತ್ರಗಳನ್ನು ಮಾಡಿದ್ರೆ ಕಾದು ಕುಳಿತುಕೊಳ್ಳುವ ಕ್ಯಾರೆಕ್ಟರ್‌ ಎಲ್ಲ ನಮಗೆ ಆಗುತ್ತಾ? ಇದೆಲ್ಲ ನಮಗೆ ಸೂಟ್‌ ಆಗಲ್ಲ. ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಬಹುದು. ಸಿನಿಮಾದಿಂದ ನಾನು ದೂರ ಆಗುತ್ತೇನೆ ಅಂಥ ಹೇಳಲ್ಲ. ಒಬ್ಬ ನಾಯಕ ನಟನ ಪಾತ್ರದಿಂದ ದೂರ ಆಗಬಲ್ಲೆ. ನಾನು ಹೀರೋ ಇಮೇಜ್‌ ಅಲ್ಲೇ ಸ್ಟಕ್‌ ಆಗಿ ನಿಲ್ಲಿಲ್ಲ. ಪಾತ್ರಗಳನ್ನು ಮಾಡೋಕೆ ಖುಷಿಯಿದೆ ಆದ್ರೆ ಅದಕ್ಕಾಗಿಯೇ ಸ್ಟಕ್‌ ಆಗಿ ಖಂಡಿತ ನಿಲ್ಲಲ್ಲ ಎಂದು ಸುದೀಪ್‌ ಹೇಳಿದ್ದಾರೆ. ರಿಟೈರ್‌ಮೆಂಟ್​​​ ಹೀರೋ ಪಾತ್ರಕ್ಕೆ ಮಾತ್ರ ಸಿನಿಮಾಲೋಕದಿಂದ ಅಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ.

ಜೀವನ ಸಂಗಾತಿ ಬೇಡವೆಂದಲ್ಲ.. ನೋ ಎನ್ನಲು ಇರುವುದು ಈ ಕಾರಣ; ನಟಿ ಮನೀಶಾ ಕೋಯಿರಾಲಾ ಹೇಳಿದ್ದೇನು | Manisha Koirala

Share This Article

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…

ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…