ನಟಿಯ ಈ ಹೊಸ ಫೋಟೋಗಳನ್ನು ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ. ಇನ್ನು, ಖುಷ್ಬೂ ಕಟ್ಟಾಭಿಮಾನಿಗಳಂತೂ ಅವರ ಈ ತೂಕ ಇಳಿಸುವ ಕೆಲಸದಲ್ಲಿ ನಟಿ ಪಟ್ಟ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದು, ಮಸ್ತ್ ವೈರಲ್ ಕೂಡ ಆಗುತ್ತಿವೆ. ಇನ್ನು, ಕರೊನಾ ಮೂರನೇ ಅಲೆ ಇದ್ದು, ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಕೂಡ ಈ ಹಿಂದೆ ಕರೊನಾಗೆ ತುತ್ತಾಗಿದ್ದರು. ನಂತರ, ಒಂದು ವಾರದ ಬಳಿಕ ನಟಿ ಚೇತರಿಸಿಕೊಂಡಿದ್ದು, ಲಂಡನ್ಗೆ ತೆರಳಿದ್ದರು.