ಆದರೆ, ಸದ್ಯ ಈ ಸಿನಿಮಾ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಇತ್ತೀಚೆಗೆ, ಯಾವುದೇ ಸಿನಿಮಾ ಅಥವಾ ಎಂತಹ ಒಳ್ಳೆಯ ಸಿನಿಮಾವಾದರೂ ಮಿನಿಮಮ್ 10 ದಿನ ಹೌಸ್ಫುಲ್ ಆಗುತ್ತೆ. ನಂತರ, ಆ ಸಿನಿಮಾಗಳು OTT ವೇದಿಕೆಯಲ್ಲಿ ಬಿಡುಗಡೆಯಾದರೆ ಆಗ ಚಿತ್ರಮಂದಿರಗಳಿಗೆ ಬಂದು ಜನ ಸಿನಿಮಾ ನೋಡುವುದು ಬಹಳಷ್ಟು ವಿರಳ. ಆದರೆ, 'ಬಡವ ರಾಸ್ಕಲ್' ಚಿತ್ರ VOOT ವೇದಿಕೆಯಲ್ಲಿ ರಿಲೀಸ್ ಆದ ನಂತರವೂ ಚಿತ್ರಮಂದರಿಗಳಲ್ಲಿ ಹೌಸ್ಫುಲ್ ಬೋರ್ಡ್ ಗಿಟ್ಟಿಸಿಕೊಂಡಿದೆ.