ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೆೇರಿ, ಕೆಮುಂಡೇಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ- ಬಾಲಕಿಯರ ಖೋಖೋ ಪಂದ್ಯಾಟಕ್ಕೆ ಎಲ್ಲೂರು ಗ್ರಾಪಂ ಅಧ್ಯಕ್ಷ ರವಿರಾಜ್ ಭಟ್ ಚಾಲನೆ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಗ್ರಾಪಂ ಉಪಾಧ್ಯಕ್ಷೆ ಉಷಾ, ಸದಸ್ಯರಾದ ದಯಾನಂದ ಶೆಟ್ಟಿಗಾರ್, ಹರೀಶ್ ಮೂಲ್ಯ, ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷೆ ಶಾಂತಾ ಎಸ್, ಉದ್ಯಮಿ ವೀರೇಂದ್ರ ಹೆಗ್ಡೆ, ವೈ.ಸುದರ್ಶನ್ ರಾವ್, ಕೃಷ್ಣಾನಂದ ರಾವ್, ಯುವಜನ ಕ್ರೀಡಾ ನಿರ್ದೇಶಕ ರಿತೇಶ್ ಶೆಟ್ಟಿ ಸೂಡ, ರಾಮಕೃಷ್ಣ ಭಟ್, ಚಂದ್ರಶೇಖರ ಶೆಟ್ಟಿಗಾರ್, ಜಗನ್ನಾಥ್ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಸುವರ್ಣ ಪ್ರಸ್ತಾವನೆಗೈದರು. ನಿವೃತ್ತ ಶಿಕ್ಷಕ ಚಂದ್ರಹಾಸ ಡಿ.ಪ್ರಭು ಸ್ವಾಗತಿಸಿದರು. ಶಿಕ್ಷಕಿ ಸುಕೇತಾ ವಂದಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶದ ವಿವರ
ಬಾಲಕರ ವಿಭಾಗದಲ್ಲಿ ಕೆಮುಂಡೇಲು ಎಲ್ಲೂರು ಹಿ.ಪ್ರಾ ಶಾಲೆ ಪ್ರಥಮ, ಪಟ್ಲ ಮುರಾರ್ಜಿ ದೇಸಾಯಿ ವಸತಿ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಪಟ್ಲ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಥಮ, ಶಿರ್ವ ಡಾನ್ ಬಾಸ್ಕೋ ಹಿ.ಪ್ರಾ.ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.