

ಗಂಗೊಳ್ಳಿ: ತನ್ನಲ್ಲಿರುವ ಪ್ರತಿಭೆಯನ್ನು ಸರ್ವರಿಗೂ ಧಾರೆ ಎರೆಯುವ ಮೂಲಕ ನೈಜ ಶಿಕ್ಷಕಿಯಾಗಿ ಎಂದು ಸಾಬೀತುಪಡಿಸಿದ ಹಿರಿಮೆ ಸುಮನಾ ಅವರಿಗೆ ಸಲ್ಲುತ್ತದೆ ಎಂದು ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ ಹೇಳಿದರು.
ಕುಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಒಂಬತ್ತು ವರ್ಷ ಸೇವೆ ಸಲ್ಲಿಸಿ ಸಿಆರ್‌ಪಿ ಹುದ್ದೆಗೆ ವರ್ಗವಾದ ಸುಮನಾ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷೆ ದೀಪಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶ್ರೀಲತಾ ಸುಮನಾ ಅವರನ್ನು ಅಭಿನಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಉಷಾ ಮಾತನಾಡಿದರು. ವಿದ್ಯಾರ್ಥಿನಿ ರೇಖಾ ಅನಿಸಿಕೆ ವ್ಯಕ್ತಪಡಿಸಿದರು. ಪತ್ರಕರ್ತ ಲಕ್ಷ್ಮೀ ಮಚ್ಚಿನ, ಡಿಇಆರ್‌ಟಿ ಪ್ರದೀಪ್ ಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಶೋಭಾ, ಮಾಜಿ ಅಧ್ಯಕ್ಷ ದತ್ತಾನಂದ ನಾಯಕ್, ಪ್ರಭಾರ ಮುಖ್ಯ ಶಿಕ್ಷಕಿ ವಿನಯಾ ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು. ಉಷಾ ವಂದಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು.