ಮೀನುಗಾರರಿಗೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ

fisherman
ಪರಿಶಿಷ್ಟ ಜಾತಿಯ ಮೀನುಗಾರರಿಗೆ ಜೈವಿಕ ಸುರಕ್ಷತೆ ಮತ್ತು ವೈಯಕ್ತಿಕ ನೈರ್ಮಲ್ಯ ಅಂಶಗಳ ಕುರಿತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ ನಡೆಯಿತು
Published on

ಗಂಗೊಳ್ಳಿ: ಎಂಫೆಡಾ ಹಾಗೂ ನೆಟ್‌ಫಿಶ್ ಮಂಗಳೂರು ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಬಳ್ಕೂರು ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಯ ಮೀನುಗಾರರಿಗೆ ಜೈವಿಕ ಸುರಕ್ಷತೆ ಮತ್ತು ವೈಯಕ್ತಿಕ ನೈರ್ಮಲ್ಯ ಅಂಶಗಳ ಕುರಿತು ಒಂದು ದಿನದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ ಸೋಮವಾರ ನಡೆಯಿತು.

ಬಳ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಸಿಒ ನಾರಾಯಣ ಕೆ.ಎ. ನೆಟ್‌ಫಿಶ್ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಪಿಎಂಎಫ್‌ಎಂಇನ ಡಿಆರ್‌ಪಿ ಸತೀಶ್ ಮಾಬೆನ್, ಭಾರತಿ ಹಾಗೂ ತರಬೇತಿ ಕೇಂದ್ರದ ರೇಖಾ ಗೋಪಾಲ್ ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ, ಮೀನು ಸಂರಕ್ಷಣೆ, ಶೀತಲ ಸರಪಳಿ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 30 ಶಿಬಿರಾರ್ಥಿಗಳಿಗೆ ಸಮವಸ್ತ್ರ, ರೈನ್ ಕೋಟ್‌ಗಳು ಮತ್ತು ರಬ್ಬರ್ ಕೈಗವಸುಗಳನ್ನು ಹಾಗೂ ಸಹಾಯ ಸಾಮಗ್ರಿಗಳನ್ನು ವಿತರಿಸಲಾಯಿತು. ಗಂಗೊಳ್ಳಿಯ ಎಚ್‌ಡಿಸಿ ಸರಸ್ವತಿ ಮತ್ತು ಮಂಗಳೂರು ನೆಟ್‌ಫಿಶ್ ಸಂಸ್ಥೆಯ ಎಡಿಸಿ ಯಶ್ವಿನ್ ಕಾರ್ಯಕ್ರಮಕ್ಕೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net