ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರವನ್ನು ಕೊನೆಗಾಣಿಸುವಲ್ಲಿ ಪ್ರಧಾನಿ ಮೋದಿ ಸರ್ಕಾರ ವಿಫವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ರಾಜ್ಯದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಮೋದಿಜಿ ಏಕೆ ಬಯಸುವುದಿಲ್ಲ ಎಂದು ಮಣಿಪುರ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಟ್ರೈನಿ ವೈದ್ಯೆ ಹತ್ಯೆ ಕೇಸ್; ಮರಣೋತ್ತರ ಪರೀಕ್ಷೆ ದಾಖಲೆ ಮಿಸ್ಸಿಂಗ್.. ಸಿಬಿಐಗೆ ಸುಪ್ರೀಂ ಸೂಚಿಸಿದ್ದೇನು ಗೊತ್ತಾ?
ಕಳೆದ ವರ್ಷ ಮೇ ತಿಂಗಳಿನಲ್ಲಿ ಆರಂಭವಾದ ಹಿಂಸಾಚಾರ ಕಳೆದ ವಾರದಲ್ಲಿ ಡ್ರೋನ್ಗಳ ಮೂಲಕ ಉಲ್ಬಣಗೊಂಡಿದೆ. ಮೈಥೇಯಿ ಮತ್ತು ಕುಕಿ ಪ್ರದೇಶಗಳ ನಡುವಿನ ಸೂಕ್ಷ್ಮ ಪ್ರದೇಶಕ್ಕೆ ಆಕಸ್ಮಿಕವಾಗಿ ಹೋದ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಈ ಪರಿಸ್ಥಿತಿಯು ಪ್ರಧಾನಿ ಮೋದಿ ಅವರ ಆಡಳಿದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಮೋದಿಯವರಂತೆ ಕೇಂದ್ರ ಗೃಹಸಚಿವರು ಅಮಿತ್ ಷಾ ಮಣಿಪುರದ ಭದ್ರತೆ ಖಾತ್ರಿಪಡಿಸುವ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಬಿಟ್ಟಿದ್ದಾರೆ. ಅವರು ರಾಜ್ಯಗಳ ಚುನಾವಣೆಗಳ ರ್ಯಾಲಿಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು. ಇನ್ನು ಮಣಿಪುರದ ಮುಖ್ಯಮಂತ್ರಿಗಳು ತಮ್ಮ ಅಸಮರ್ಥತೆಯನ್ನು ನಾಚಿಕೆಯಿಲ್ಲದೆ ನಿರ್ಲಜ್ಜೆಯಿಂದ ಹೊರಹಾಕುವಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸಿಎಂ ಎನ್.ಬಿರೇನ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಮಣಿಪುರದಲ್ಲಿ ಡ್ರೋನ್ ಮತ್ತು ರಾಕೆಟ್ ಚಾಲಿತ ಗ್ರೆನೇಡ್ ದಾಳಿಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಭದ್ರತಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಏಕೀಕೃತ ಕಮಾಂಡ್ ಅನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಬೇಕು. ಹಿಂಸಾಚಾರದ ತನಿಖೆ ನಡೆಸುತ್ತಿರುವ ಫೆಡರಲ್ ಏಜೆನ್ಸಿಗಳನ್ನು ಮೋದಿ ಸರ್ಕಾರ ದುರುಪಯೋಗಪಡಿಸಿಕೊಳ್ಳಬಾರದು. ಸೂಕ್ಷ್ಮ ಭದ್ರತಾ ಪರಿಸ್ಥಿತಿಯ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಖರ್ಗೆ ಹೇಳಿದರು. (ಏಜೆನ್ಸೀಸ್)
ಪಿಒಕೆ ಜನರನ್ನು ಪಾಕ್ನಂತೆ ವಿದೇಶಿಯರೆನ್ನುವುದಿಲ್ಲ; ಅವರು ನಮ್ಮವರೆ ಎಂದ ಸಚಿವ ರಾಜನಾಥ್ ಸಿಂಗ್