

ಬೆಂಗಳೂರು: ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಕೆಜಿಎಫ್ ಸಿನಿಮಾ ತಂಡ, ನಾಯಕಿಯ ಜನ್ಮದಿನಕ್ಕೆ ಶುಭಾಶಯ ಕೋರಿದೆ. ಈ ವರೆಗೆ ಕಾಣಿಸಿಕೊಳ್ಳದ ಹೊರ ಫೋಟೋವೊಂದನ್ನು ಶೇರ್ ಮಾಡಿಕೊಂಡು, ಬರ್ತ್ಡೇಗೆ ವಿಶ್ ಮಾಡಿದೆ ಚಿತ್ರತಂಡ.
ಇದನ್ನೂ ಓದಿ: ಎನ್ಸಿಬಿ ವಿರುದ್ಧವೇ ಕೇಸ್ ದಾಖಲಿಸಿದ ಸುಶಾಂತ್ ಆಪ್ತ!
ಪ್ರೀತಿ ಮತ್ತು ಕ್ರೂರತೆ ಸಹಬಾಳ್ವೆ ನಡೆಸಬಹುದೇ? ಎಂಬ ಅರ್ಥದಲ್ಲಿ ಕ್ಯಾಪ್ಶನ್ ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರದ ನಮ್ಮ ನಾಯಕ ನಟಿಗೆ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ.
ಇತ್ತೀಚೆಗಷ್ಟೇ ಉಡುಪಿ ಸುತ್ತಮುತ್ತ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿದ್ದ ಚಿತ್ರತಂಡ, ಸದ್ಯ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದೆ. ಇದಾದ ಬಳಿಕ ಮುಂಬೈನಲ್ಲಿ ಚಿತ್ರದ ಶೂಟಿಂಗ್ ಮಾಡಿಕೊಳ್ಳಲಿದೆ.
ನಟ ಯಶ್ಗೆ ಜೋಡಿಯಾಗಿರುವ ಶ್ರೀನಿಧಿ, ಮೊದಲ ಚಾಪ್ಟರ್ಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಚಾಪ್ಟರ್ 2ರ ಲುಕ್ನಲ್ಲಿ ಸೀರೆಯಲ್ಲಿ ಶ್ರೀನಿಧಿ ಎದುರಾಗಿದ್ದು, ಕುತೂಹಲ ಮೂಡಿಸಿದೆ.