

ಮುಂಬೈ: ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪ ಎದುರಿಸಿರುವ ಅವರ ಆಪ್ತ ದೀಪೇಶ್ ಸಾವಂತ್, ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಿರುದ್ಧ ಕೇಸರು ದಾಖಲಸಿದಿದ್ದಾರೆ. ಅಷ್ಟೇ ಅಲ್ಲ, ತಮಗೆ 10 ಲಕ್ಷ ಪರಿಹಾರ ಕಟ್ಟಿಕೊಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನಮ್ಮಲ್ಲಿ ಕೂರ್ಗ್ ದಸರಾದ್ದೇ ದರ್ಬಾರು…’
ಎನ್ಸಿಬಿ ವಿರುದ್ಧವೇ ದೀಪೇಶ್ ದಾವೆ ಹೂಡಲು ಕಾರಣವೇನು ಎಂಬ ಪ್ರಶ್ನೆ ಸಹಜ. ತಮ್ಮನ್ನು ಎನ್ಸಿಬಿ ಅವರು ಅನಗತ್ಯವಾಗಿ ಬಂಧನದಲ್ಲಿಟ್ಟುಕೊಂಡಿದ್ದಾರೆ ಎಂದು ದೀಪೇಶ್ ವಾದ.
ಸುಶಾಂತ್ ಸಿಂಗ್ ಜೂನ್ 14ರಂದು ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅಸಹಜ ಸಾವಿನ ಕುರಿತಾಗಿ ಮೂರು ರಾಷ್ಟ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಈ ಪೈಕಿ ಎನ್ಸಿಬಿ ಸಹ ಒಂದು. ಡ್ರಗ್ಸ್ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ಎನ್ಸಿಬಿ ಅಧಿಕಾರಿಗಳು, ಸುಶಾಂತ್ಗೆ ದೀಪೇಶ್ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಕಾರಣಕ್ಕೆ ಬಂಧಿಸಿದ್ದರು. ಈಗ ಇದೇ ವಿಷಯವಾಗಿ ದೀಪೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಾಮಾನ್ಯವಾಗಿ ಯಾರನ್ನೇ ಬಂಧಿಸಿದರೂ, 24 ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟರ ಎದುರು ಹಾಜರುಪಡಿಸಬೇಕು. ಆದರೆ, ದೀಪೇಶ್ ಅವರನ್ನು ಬಂಧಿಸಿ 36 ತಾಸುಗಳ ನಂತರ ಹಾಜರುಪಡಿಸಲಾಯಿತಂತೆ. ಇದು ಉಲ್ಲಂಘನೆ ಎಂದಿರುವ ದೀಪೇಶ್, ತಮ್ಮನ್ನು ತಪ್ಪಾಗಿ ಬಂಧಿಸಿದ್ದಿಕ್ಕೆ ಮತ್ತು ಈ ವಿಷಯದಲ್ಲಿ ಶಿಷ್ಟಾಚಾರ ಪಾಲಿಸದಿದ್ದಿಕ್ಕೆ ಕೋರ್ಟ್ ಮೆಟ್ಟಿಲೇರಿರುವ ದೀಪೇಶ್, ತಮಗೆ 10 ಲಕ್ಷ ಪರಿಹಾರ ಕೊಡಬೇಕು ಎಂದು ಕೇಳಿದ್ದಾರೆ.
ಸದ್ಯಕ್ಕೆ ಈ ದಾವೆಯ ಬಗ್ಗೆ ಎರಡು ವಿಚಾರಣೆಗಳು ನಡೆದಿದ್ದು, ಎನ್ಸಿಬಿ ಅಧಿಕಾರಿಗಳು ಉತ್ತರಿಸಲು ಇನ್ನಷ್ಟು ಕಾಲಾವಕಾಶ ಕೇಳಿದ್ದಾರೆ.