

ಬೆಂಗಳೂರು: ಅತೀ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ಚಿತ್ರಗಳ ಪಟ್ಟಿಯನ್ನು ಟ್ವಿಟರ್ ಬಿಡುಗಡೆ ಮಾಡಿದೆ. 10 ಚಿತ್ರಗಳ ಪಟ್ಟಿಯಲ್ಲಿ ಯಶ್ ಅಭಿನಯದ 'ಕೆಜಿಎಫ್ - ಚಾಪ್ಟರ್ 2' ಚಿತ್ರವು ಒಂಬತ್ತನೇ ಸ್ಥಾನದಲ್ಲಿದ್ದು, ರಜನಿಕಾಂತ್ ಅವರ 'ದರ್ಬಾರ್' ಚಿತ್ರವನ್ನೂ ಹಿಂದಿಕ್ಕಿದೆ ಎನ್ನುವುದು ವಿಶೇಷ.
ಇದನ್ನೂ ಓದಿ: ‘ಅಣ್ಣಾತ್ತೆ’ ಚಿತ್ರೀಕರಣಕ್ಕೆ ವಾಪಸ್ಸಾದ ರಜನಿಕಾಂತ್ …
ದಕ್ಷಿಣ ಭಾರತದ ಈ 10 ಚಿತ್ರಗಳ ಪೈಕಿ ತೆಲುಗು ಚಿತ್ರಗಳ ಸಂಖ್ಯೆ ಐದಿದ್ದರೆ, ತಮಿಳಿನ ನಾಲ್ಕು ಚಿತ್ರಗಳಿವೆ. ಇನ್ನು ಕನ್ನಡದಿಂದ ಒಂದು ಚಿತ್ರ ಮಾತ್ರ ಇದೆ. ಅದರಲ್ಲೂ ಕನ್ನಡದಿಂದ 'ಕೆಜಿಎಫ್ - ಚಾಪ್ಟರ್ 2' ಮಾತ್ರ ಆಯ್ಕೆಯಾಗಿದೆ.
2020ರಲ್ಲಿ ಅತೀ ಹೆಚ್ಚು ಟ್ವೀಟ್ ಆದ ಚಿತ್ರಗಳ ಪೈಕಿ ತಮಿಳು ನಟ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರವು ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್', ಅಜಿತ್ ಅಭಿನಯದ 'ವಾಲಿಮೈ', ಮಹೇಶ್ ಬಾಬು ಅಭಿನಯದ 'ಸರಕಾರು ವಾರಿ ಪಾಠ', ಸೂರ್ಯ ಅಭಿನಯದ 'ಸೂರರೈ ಪೋಟ್ರು',ರಾಮ್ಚರಣ್ ತೇಜ ಮತ್ತು ಜ್ಯೂನಿಯರ್ ಎನ್ಟಿಆರ್ ಅಭಿನಯದ 'ಆರ್ಆರ್ಆರ್', ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ', ಮಹೇಶ್ ಬಾಬು ಅಭಿನಯದ 'ಸರಲೇರು ನೀಕೆವ್ವರು', ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಮತ್ತು ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರಗಳು ಇವೆ.
ಇದನ್ನೂ ಓದಿ: ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಕಂಗನಾ … ಯಾಕಿರಬಹುದು?
ಇನ್ನು, ಮಲಯಾಳಂ ಚಿತ್ರರಂಗದಿಂದ ಯಾವೊಂದು ಚಿತ್ರ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹ.