ಸಿನಿಮಾ

ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಹತ್ಯೆ ಪ್ರಕರಣ | ಆರೋಪಿಗೆ ಯಾವುದೇ ಮಾನಸಿಕ ಸಮಸ್ಯೆಗಳಿಲ್ಲ; ವೈದ್ಯರಿಂದ ಸ್ಪಷ್ಟನೆ

ತಿರುವನಂತಪುರಂ: ಕೇರಳದ ಮಹಿಳಾ ವೈದ್ಯೆ ಡಾ.ವಂದನಾ ದಾಸ್‌ ಹತ್ಯೆ ಆರೋಪಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ ಎಂದು ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಆರೋಗ್ಯ ಕೇಂದ್ರದ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕೊಲೆ ಆರೋಪಿ ಸಂದೀಪ್‌ಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ವೈದ್ಯರು ದೃಢಪಡಿಸಿದರೆ ಆತನನ್ನು ಮಾನಸಿಕ ಆರೋಗ್ಯ ಚಿಕಿತ್ಸೆಗೆ ಒಳಪಡಿಸಲು ಉದ್ದೇಶಿಸಿದ್ದರಿಂದ ಪೊಲೀಸರು ತಪಾಸಣೆಗೆ ಕರೆತಂದಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದು ಹತ್ಯೆ!

ಆರೋಪಿ ಸಂದೀಪ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಪೊಲೀಸರ ಉಪಸ್ಥಿತಿಯಿಂದ ಆಕ್ರೋಶಗೊಂಡು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಚಕಿತ್ಸೆಯ ವೇಳೆ ವೈದ್ಯರು ಹಾಗೂ ಪೊಲೀಸರು ತೊಂದರೆ ಕೊಡಬಹುದು ಎಂಬ ಭಯದಿಂದ ಆರೋಪಿ ಆಕ್ರೋಶಗೊಂಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿರುವುದು ವರದಿಯಾಗಿದೆ. ಸದ್ಯ ಆರೋಪಿಯನ್ನು ತಿರುವನಂತಪುರಂನ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಏನಿದು ಘಟನೆ?

ವೈದ್ಯಕೀಯ ಚಿಕಿತ್ಸೆಗೆಂದು ಪೊಲೀಸರು ಕರೆತಂದಿದ್ದ ಆರೋಪಿ ಸಂದೀಪ್(42) ಚಿಕಿತ್ಸೆ ನೀಡುತ್ತಿದ್ದ ವಂದನಾ ದಾಸ್​(22) ಎಂಬ ವ್ಯದ್ಯೆಯನ್ನು ಇರಿದು ಕೊಂದಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲ್ಲೂಕು ಆಸ್ಪತ್ರೆಯಲ್ಲಿ ಮೇ 10ರಂದು ನಡೆದಿತ್ತು. ವೈದ್ಯೆಯ ಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕೇರಳ ರಾಜ್ಯದಾದ್ಯಂತ ವೈದ್ಯರು ಮುಷ್ಕರಕ್ಕೆ ನಡೆಸಿದ್ದರು. ಅಲ್ಲದೇ ದೇಶದಾದ್ಯಂತ ಪ್ರಕರಣದ ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿತ್ತು. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್