ಮತ ಹಾಕಿಲ್ಲವೆಂದು ಸಹೋದರರ ನಡುವೆ ಜಗಳ; ಸಿಟ್ಟಿನಲ್ಲಿ ದೊಡ್ಡಪ್ಪನ ಜೀವವನ್ನೇ ತೆಗೆದ ಮಗ!

Crime News
Published on

ದೇವನಹಳ್ಳಿ: ಕ್ಷಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡಪ್ಪನನ್ನೇ ಮಗ ಹತ್ಯೆಗೈದಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (56) ಮೃತ ರ್ದುದೈವಿ. ಆದಿತ್ಯ ಕೊಲೆ ಆರೋಪಿಯಾಗಿದ್ದು, ಚಾಕುವಿನಿಂದ ಇರಿದು ದೊಡ್ಡಪ್ಪನ ಜೀವ ತೆಗೆದಿದ್ದಾನೆ.

ಮೇ.13ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ರಾತ್ರಿ ಚುನಾವಣೆಯ ವಿಚಾರಕ್ಕೆ ಗ್ರಾಮದ ಕೃಷ್ಣಪ್ಪ ಹಾಗೂ ಗಣೇಶಪ್ಪ ಎಂಬ ಸಹೋದರರ ನಡುವೆ ವಾಗ್ವಾದ ಆರಂಭವಾಗಿದೆ. ಮತ ಹಾಕಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಸಹೋದರರು ಜಗಳ ಮಾಡಿದ್ದಾರೆ. ಈ ವೇಳೆ ಈ ವೇಳೆ ಗಣೇಶಪ್ಪನ ಮಗ ಕೃಷ್ಣಪ್ಪನನ್ನು ಕೊಲೆ ಮಾಡಿದ್ದಾನೆ.

ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net