More

    ಸಿ.ಟಿ.ರವಿ ಸೋಲಿಗೆ ಅವರ ನಾಲಗೆಯೇ ಕಾರಣ: ಎಸ್.ಎಲ್.ಭೋಜೇಗೌಡ

    ಚಿಕ್ಕಮಗಳೂರು: ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ರಾಜಕೀಯವಾಗಿ ಬೆಳವಣಿಗೆ ಆಗಿದ್ದರು. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ರಾಜಕೀಯದಲ್ಲಿ ಟೀಕೆಗಳು ತಪ್ಪಲ್ಲ. ಆದರೆ ಅದಕ್ಕೊಂಡು ಇತಿಮಿತಿ ಇರಬೇಕಾಗುತ್ತದೆ. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ. ಇದು ಸಿ.ಟಿ.ರವಿ ಅವರ ಚುನಾವಣಾ ಸೋಲಿಗೆ ಪ್ರಮುಖ ಕಾರಣ ಎಂದು ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.

    ಇದನ್ನೂ ಓದಿ: ಹುಂಬ ವಿಶ್ವಾಸ; ಸೋಲಿನ ಸಹವಾಸ

    ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಾ, ಸಿ.ಟಿ.ರವಿ ಸದನದ ಒಳಗೆ ಹಾಗೂ ಹೊರಗೆ ಸಾಕಷ್ಟು ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕಿಸುವ ವೇಳೆ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನು ಯೋಚನೆ ಮಾಡಬೇಕು. ಯಾರನ್ನೋ ಮೆಚ್ವಿಸಲು, ಕ್ಷಣಿಕ ಸುಖಕ್ಕೆ, ಕಾರ್ಯಕರ್ತರನ್ನು ಮೆಚ್ಚಿಸಲು ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಹೇಳಿದರು.

    ಮಾಜಿ ಪ್ರಧಾನಿ ದೇವೇಗೌಡರು ಮುಸ್ಲಿಮರಾಗಿ ಹುಟ್ಟಲಿ ಎನ್ನುವುದು, ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎನ್ನುತ್ತಾ ಟೀಕಿಸುವುದನ್ನು ಜನರು ಸೂಕ್ಷ್ಮವಾಗಿ ನೋಡುತ್ತಾರೆ. ಟೀಕಿಸುವ ವಿಚಾರದಲ್ಲಿ ಸಿ.ಟಿ.ರವಿ ಯಾರನ್ನೂ ಬಿಟ್ಟಿಲ್ಲ. ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್​​​ನಲ್ಲಿ ಟೀಕೆ ಮಾಡಬೇಕು ಎಂದು ಎಸ್.ಎಲ್.ಭೋಜೇಗೌಡ ಟಾಂಗ್ ಕೊಟ್ಟರು.

    ಇದನ್ನೂ ಓದಿ: VIDEO | ಕರ್ನಾಟಕದಲ್ಲಿ ಸ್ಪಷ್ಟ ಬಹುಮತ; ಹನುಮಾನ್ ಚಾಲೀಸಾ ಪಠಿಸಿದ ಕಾಂಗ್ರೆಸ್ ನಾಯಕರು

    ಕುಲದ ಬಗ್ಗೆ ಮಾತನಾಡುವಾಗ ಜನರು ಟೀಕಿಸುವ ವ್ಯಕ್ತಿಯ ಹಮ್ಮಿನ ಬಗ್ಗೆ ಯೋಚಿಸುತ್ತಾರೆ. ಇಂದು ಚುನಾವಣೆಯಲ್ಲಿ ಸಿ.ಟಿ.ರವಿ ಸೋಲಲು ಅವರ ನಾಲಗೆಯೇ ಕಾರಣ. ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಸೋಲಿಸಿವೆ ಎಂದು ಎಸ್.ಎಲ್.ಭೋಜೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts