ಕೊಚ್ಚಿ ಹಡಗು ಮುಳುಗಡೆ ಬಳಿಕ ಕೇರಳದಲ್ಲಿ ಎಚ್ಚರಿಕೆ; ತೈಲ ಸೋರಿಕೆಯಿಂದ ನಷ್ಟವಾಗಿದ್ದೆಷ್ಟು ಗೊತ್ತಾ? Shipwreck

kochi
Published on

kochi | 640 ಕಂಟೇನರ್‌ಗಳನ್ನು ಹೊತ್ತ ಲೈಬೀರಿಯನ್ ಹಡಗು ಇಂದು (25) ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದು, ಇದರಿಂದಾಗಿ ಭಾರಿ ತೈಲ ಸೋರಿಕೆಯಾಗಿದೆ. ಶನಿವಾರ ಹಡಗು ತೀವ್ರ ವಾಲುವಿಕೆಗೆ ಒಳಗಾದ ನಂತರ ಎಲ್ಲಾ 24 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ದಡದಲ್ಲಿ ತೇಲುತ್ತಿರುವ ಯಾವುದೇ ವಸ್ತುಗಳು ಅಥವಾ ತೈಲವನ್ನು ಮುಟ್ಟದಂತೆ ಸಲಹೆ ನೀಡಿದೆ.

ಸೋರಿಕೆಯಾದ ಇಂಧನವು ಗಂಟೆಗೆ ಸುಮಾರು ಮೂರು ಕಿ.ಮೀ ವೇಗದಲ್ಲಿ ತೇಲುತ್ತಿದ್ದು, ಕೇರಳ ಕರಾವಳಿಯಲ್ಲಿ ಇದರ ಸಂಭಾವ್ಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಎಚ್ಚರಿಕೆಯನ್ನು ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿದೆ.

ಹಡಗಿನಲ್ಲಿದ್ದ ವಸ್ತುಗಳೇನು?

ಮುಳುಗಿದ ಹಡಗು 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ಫರ್ನೇಸ್ ಎಣ್ಣೆಯನ್ನು ಹೊತ್ತೊಯ್ಯುತ್ತಿತ್ತು ಮತ್ತು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿತ್ತು ಎಂದು ವರದಿ ಮಾಡಿದೆ. ಇದು ಸಮುದ್ರದ ನೀರಿನೊಂದಿಗೆ ಅಪಾಯಕಾರಿಯಾಗಿ ಪ್ರತಿಕ್ರಿಯಿಸಿ ಹೆಚ್ಚು ಸುಡುವ ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುವ ರಾಸಾಯನಿಕವಾಗಿದೆ.

(ಏಜೆನ್ಸೀಸ್)

ಇದುವರೆಗೆ ಯಾವುದೇ ತೈಲ ಸೋರಿಕೆ ಅಧಿಕೃತವಾಗಿ ವರದಿಯಾಗಿಲ್ಲವಾದರೂ ಹಡಗಿನಲ್ಲಿರುವ ಇಂಧನ ಮತ್ತು ಅಪಾಯಕಾರಿ ಸರಕುಗಳಿಂದ ಉಂಟಾಗುವ ಹೆಚ್ಚಿನ ಅಪಾಯದ ಕಾರಣಕ್ಕೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಕೋಸ್ಟಲ್ ಗಾರ್ಡ್ ತನ್ನ ಮಾಲಿನ್ಯ ತಡೆ ಪ್ರತಿಕ್ರಿಯೆ ಹಡಗು 'ಸಕ್ಷಮ್' ಅನ್ನು ಸ್ಥಳದಲ್ಲಿ ನಿಯೋಜಿಸಿದ್ದು, ಸುಧಾರಿತ ತೈಲ ಸೋರಿಕೆ ಮ್ಯಾಪಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಮಾನವನ್ನೂ ಬಳಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net