

ನವದೆಹಲಿ: ಇಂದು ಮುಂಜಾನೆ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗಿದ್ದರಿಂದ, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯ ಒಂದು ಭಾಗ ನೀರಿನ ಅಪಾರ ಒತ್ತಡದಿಂದಾಗಿ ಒಡೆದು ಕುಸಿದು ಬಿದ್ದಿದೆ.
ನಿನ್ನೆ ರಾತ್ರಿಯ ವಿಮಾನಗಳ ಹಾರಾಟದಲ್ಲಿ ಉಂಟಾದ ಅಡಚಣೆಗಳು ಇನ್ನೂ ಪರಿಣಾಮ ಬೀರಿವೆ. ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುತ್ತಿರಬೇಕೆಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಚಂಡಮಾರುತದ ಸಮಯದಲ್ಲಿ 25ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿತ್ತು.
ಈ ಪರಿಣಾಮ ಆಗಮನದ ಮುಂಭಾಗದ ಆವರಣದೊಳಗೆ ನೀರು ನುಗ್ಗಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೇರಳ ಕಾಂಗ್ರೆಸ್ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
(ಏಜೆನ್ಸೀಸ್)
ಸದ್ದರ್‌ಜಂಗ್‌ನಲ್ಲಿ 81 ಮಿಮೀ, ಪಾಲಂನಲ್ಲಿ 68 ಮಿಮೀ, ಪುನಾದಲ್ಲಿ 71 ಮಿಮೀ ಹಾಗೂ ಮಯೂರ್ ವಿಹಾರ್‌ನಲ್ಲಿ 48 ಮಿಮೀ ಮಳೆಯಾಗಿದೆ. ನಗರದ ಇತರ ಹಲವು ಭಾಗಗಳಲ್ಲಿ 5 ರಿಂದ 8 ಸೆಂ.ಮೀ. ಮಳೆಯಾಗಿದೆ. ವಿಮಾನ ನಿಲ್ದಾಣದ ಕಡೆಗೆ ಹೋಗುವ ಅಂಡರ್‌ಪಾಸ್‌ನಲ್ಲಿ ನೀರು ನಿಂತ ಕಾರಣ ಹಲವಾರು ವಾಹನಗಳು ಸ್ಥಗಿತಗೊಂಡಿರುವುದು ಕಂಡುಬಂದಿದೆ. ಭಾರೀ ಮಳೆಯ ಸಮಯದಲ್ಲಿ ಮಿಂಟೋ ರಸ್ತೆಯಲ್ಲಿ ನೀರು ತುಂಬಿದ ನಂತರ ಕಾರೊಂದು ಮುಳುಗಿ ಹೋಗಿರುವುದು ಕಂಡುಬಂದಿದೆ.