ಬಾಲಕಿಗೆ ಲೈಂಗಿಕ ದೌರ್ಜನ್ಯ ಕೊಟ್ಟಿದ್ದವ ಜೈಲಿನಲ್ಲಿಯೇ ಆತ್ಮಹತ್ಯೆ; ಇತ್ತ ಹುಡುಗಿಯೂ ಸಾವು

Suicide
Published on

ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಕೊಟ್ಟು ಜೈಲುಪಾಲಾಗಿದ್ದ ಆರೋಪಿ ಅಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.

ಕೇರಳದ ನರಿಯಮರ ನಿವಾಸಿ ಮನು ಮನೋಜ್​ (24) ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಕೈದಿಗಳು ಬಟ್ಟೆ ಒಣಗಿಸುವ ಜಾಗದಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  16ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಈತ ಹೊತ್ತಿದ್ದ. ಅಕ್ಟೋಬರ್ 24ರಂದು ಹುಡುಗಿಯ ಪಾಲಕರು ಮನು ವಿರುದ್ಧ ದೂರು ನೀಡಿದ್ದರು. ಲೈಂಗಿಕ ಶೋಷಣೆಗೆ ಒಳಗಾಗಿದ್ದ ಬಾಲಕಿ ಮೈಯಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ನಂತರ ಆರೋಪಿ ನಾಪತ್ತೆಯಾಗಿದ್ದ. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಶೀಘ್ರವೇ ಮನುವನ್ನು ಬಂಧಿಸಿದ್ದರು.

ಇತ್ತ ಬಾಲಕಿಯನ್ನು ಹಲವು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಈಕೆಯೂ ಬದುಕಲಿಲ್ಲ..ಅತ್ತ ಜೈಲು ಸೇರಿದ್ದ ಯುವಕನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನು ಸಿಪಿಐ(ಎಂ) ಯುವ ಮೋರ್ಚಾ ಹಾಗೂ ಡೆಮಾಕ್ರಟಿಕ್​ ಯುತ್​ ಫ್ರಂಟ್​ ಆಫ್​ ಇಂಡಿಯಾದ ಸದಸ್ಯನಾಗಿದ್ದ. ಈತನ ಮೇಲೆ ಆರೋಪ ಬರುತ್ತಿದ್ದಂತೆ ಡಿಐಎಫ್​ಐನಿಂದ ಉಚ್ಚಾಟಿತನಾಗಿದ್ದ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net