More

    ಮೊಬೈಲ್‌‌‌ ಚಟಕ್ಕೆ ಮತ್ತೊಂದು ಬಲಿ: ಆಟವಾಡಬೇಡ ಎಂದುದಕ್ಕೆ ಬಾಲಕ ಆತ್ಮಹತ್ಯೆ!

    ಮಧುರೈ (ತಮಿಳುನಾಡು): ಮೊಬೈಲ್‌ಗೇಮ್‌ ಚಟಕ್ಕೆ ದಾಸರಾದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಮುಂದುವರೆದಿದೆ. ಮೊಬೈಲ್‍ನಲ್ಲಿ ಹೆಚ್ಚು ಆಟವಾಡಬೇಡ ಎಂದು ಪಾಲಕರು ಬುದ್ಧಿಮಾತು ಹೇಳಿದ ಕಾರಣ, 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.

    ಆನ್‍ಲೈನ್ ತರಗತಿಗೆ ಹಾಜರಾಗುವ ಬದಲು 13 ವರ್ಷದ ಬಾಲಕಿ ಸ್ಮಾರ್ಟ್‌ಫೋನ್‌ನಲ್ಲಿ ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಇದನ್ನು ಕಂಡ ಪೋಷಕರು ಬಾಲಕಿಯಿಂದ ಮೊಬೈಲ್ ಕಸಿದುಕೊಂಡಿದ್ದರು. ಇದರಿಂದ ಕೋಪಿತಳಾದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಈ ಘಟನೆ ಹಸಿಯಾಗಿರುವಾಗಲೇ ಅಂಥದ್ದೇ ಒಂದು ಘಟನೆ ಮತ್ತೆ ನಡೆದಿದೆ. ಮಧುರೈ ಜಿಲ್ಲೆಯ ಸಂಬಾಕುಲಂನ ಗಾಂಡಿ ರಸ್ತೆಯ ಬಾಲಕ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಲಾಕ್‍ಡೌನ್ ಸಮಯದಲ್ಲಿ ಬಾಲಕ ಗೇಮ್ ಆಡುವುದರಲ್ಲೇ ಸಮಯ ಕಳೆದಿದ್ದು, ಇದರಿಂದಾಗಿ ಗೇಮ್ ವ್ಯಸನಿಯಾಗಿದ್ದ. ಅದನ್ನೇ ಈಗಲೂ ಮುಂದುವರೆಸಿದ್ದಾನೆ. ಇದರಿಂದಾಗಿ ಸಿಟ್ಟುಗೊಂಡ ಪಾಲಕರು ಮೊಬೈಲ್ ಕಸಿದುಕೊಂಡಿದ್ದಾರೆ.

    ಇದನ್ನೂ ಓದಿ: ಆಂಬ್ಯುಲೆನ್ಸ್‌ಗೆ ದಾರಿ ಮಾಡಲು ಕಾನ್ಸ್‌ಟೆಬಲ್‌ ಪಟ್ಟ ಸಾಹಸಕ್ಕೆ ಅಭಿನಂದನೆಗಳ ಮಹಾಪೂರ

    ಇದರಿಂದ ಸಿಟ್ಟಿನಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹೊರಗಡೆ ಹೋಗಿದ್ದ ಪಾಲಕರು ಮನೆಗೆ ಬಂದಾಗ ಮಗನ ಶವ ಕಂಡು ಕಂಗಾಲಾಗಿ ಹೋಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇತ್ತೀಚೆಗೆ ತಮಿಳುನಾಡಿನಲ್ಲಿ ಇಂತಹದ್ದೇ ಪ್ರಕರಣ ನಡೆದಿತ್ತು. ಆನ್‍ಲೈನ್ ತರಗತಿಗೆ ಹಾಜರಾಗುವ ಬದಲು 13 ವರ್ಷದ ಬಾಲಕಿ ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಇದನ್ನು ಕಂಡ ಪೋಷಕರು ಬಾಲಕಿಯಿಂದ ಮೊಬೈಲ್ ಕಸಿದುಕೊಂಡಿದ್ದರು.
    ಇದರಿಂದ ಕೋಪಿತಳಾದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿ 8ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿಯಾಗಿದ್ದಳು.

    ಸೈಕಲ್‌ ಮೇಲೆ ಬಂದ ಇಂಧನ ಸಚಿವ- ವಿದ್ಯುತ್‌ ಬಿಲ್‌ ಪಾವತಿಸಿದ ಗ್ರಾಹಕರು!

    ಮದುವೆಯಾಗಲು ಹುಡುಗಿ ಸಿಗದೇ ಸುಸ್ತಾದವ ಮಾಡಿದ ಪ್ಲ್ಯಾನ್‌- ವಿದೇಶದಿಂದಲೂ ಡಿಮಾಂಡ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts