More

    ಮದುವೆಯಾಗಲು ಹುಡುಗಿ ಸಿಗದೇ ಸುಸ್ತಾದವ ಮಾಡಿದ ಪ್ಲ್ಯಾನ್‌- ವಿದೇಶದಿಂದಲೂ ಡಿಮಾಂಡ್‌!

    ಕೊಟ್ಟಾಯಂ (ಕೇರಳ): ಒಂದೆಡೆ ಭ್ರೂಣ ಹತ್ಯೆ ಸಾಮಾನ್ಯವಾಗಿದ್ದರೆ, ಅದೇ ಇನ್ನೊಂದೆಡೆ ಮದುವೆಯಾಗಲು ಹುಡುಗಿಯೇ ಸಿಗದೇ ಎಷ್ಟೋ ಯುವಕರು ಪೇಚಾಟಕ್ಕೆ ಸಿಲುಕಿರುವುದು ಇದೀಗ ಎಲ್ಲಾ ಸಮುದಾಯಗಳಲ್ಲಿಯೂ ಮಾಮೂಲಾಗಿಬಿಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡು, ಇಂದಿನ ಹುಡುಗಿಯರು ಹಲವು ರೀತಿಯ ಡಿಮಾಂಡ್‌ ಮಾಡುತ್ತಿರುವುದು ಯುವಕರು ಅವಿವಾಹಿತರಾಗಿಯೇ ಉಳಿಯುವಂಥ ಪರಿಸ್ಥಿತಿ ತಲೆದೋರಿದೆ.

    ಇದೇ ರೀತಿ ಐದಾರು ವರ್ಷಗಳಿಂದ ಹುಡುಗಿ ಹುಡುಕಿ ಹುಡುಕಿ ಸಾಕಾದ ಕೇರಳದ ಕೊಟ್ಟಾಯಂ ಯುವಕನೊಬ್ಬ ಅದ್ಭುತ ಪ್ಲ್ಯಾನ್‌ ಮಾಡಿಬಿಟ್ಟಿದ್ದಾನೆ. ವಧು-ವರರ ಕೇಂದ್ರದಲ್ಲಿ ಹೆಸರು ನೋಂದಾಯಿಸಿದರೂ, ವೆಬ್‌ಸೈಟ್‌ಗಳಲ್ಲಿ ವಧು ಬೇಕಾಗಿದ್ದಾಳೆ ಎಂದು ಜಾಹೀರಾತು ಕೊಟ್ಟರೂ ಫಲ ಕಾಣದ 35 ವರ್ಷದ ಈ ಯುವಕನ ಪ್ಲ್ಯಾನ್‌ ಈಗ ಬಹುತೇಕ ಯಶಸ್ಸು ಕಂಡಿದೆಯಂತೆ.

    ಅಷ್ಟಕ್ಕೂ ಈ ಯುವಕ ಮಾಡಿದ ಪ್ಲ್ಯಾನ್‌ ಏನು ಗೊತ್ತಾ? ವಧು ಬೇಕಾಗಿದ್ದಾಳೆ ಎಂಬ ಫ್ಲೆಕ್ಸ್ ಹಾಕಿಸಿಬಿಟ್ಟಿದ್ದಾನೆ. ಈ ಯುವಕನ ಪ್ಲ್ಯಾನ್‌ ಕೂಡ ಯಶಸ್ವಿಯಾಗಿದ್ದು, ಅನೇಕ ಜಾತಕಗಳು ಬರುತ್ತಿವೆಯಂತೆ!

    ಇದನ್ನೂ ಓದಿ: 78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!

    ಅಂದಹಾಗೆ ಈ ಯುವಕನ ಹೆಸರು ಅನೀಶ್ ಸೆಬಾಸ್ಟೀಯನ್. ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಣಕಾರಿಯವನು. ತನ್ನದೇ ಮಾಲೀಕತ್ವದ ಮರದ ಮಿಲ್‍ನ ಹೊರಗಡೆ ಮೊದಲು ಫ್ಲೆಕ್ಸ್ ಹಾಕಿದ್ದಾನೆ ಈ ಯುವಕ, ಈತ ಫ್ಲೆಕ್ಸ್‌ ಹಾಕಿದ್ದು ಒಂದೇ ಕಡೆ, ಆದರೆ ಈತನ ಅದೃಷ್ಟ ಖುಲಾಯಿಸಿ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿಬಿಟ್ಟಿದೆ. ಇದೀಗ ಅನೇಕ ಮಂದಿ ಈತನನ್ನು ಸಂಪರ್ಕಿಸುತ್ತಿದ್ದಾರಂತೆ!

    ’ವಧು ಹುಡುಕುತ್ತಿದ್ದೇನೆ. ಪ್ರೀತಿಯೇ ಮುಖ್ಯ ಎಂಬ ಯೋಚನೆಯಲ್ಲಿ ಇರುವ, ಯಾವುದೇ ಬೇಡಿಕೆಗಳಿಲ್ಲದ, ನಮ್ಮ ಸಂಸ್ಕೃತಿಯ ಜತೆಗೂಡಿ ಸಾಗುವಂಥ ವಧು ಬೇಕಾಗಿದ್ದಾಳೆ. ಇಷ್ಟವಿದ್ದರೆ ಈ ಸಂಖ್ಯೆ ಸಂಪರ್ಕಿಸಿ’ ಎಂದು ಫ್ಲೆಕ್ಸ್‌ನಲ್ಲಿ ಬರೆದಿದ್ದಾನೆ.

    ಎಲ್ಲಾ ಕಡೆಗಳಲ್ಲಿಯೂ ಹುಡುಗಿಯನ್ನು ಹುಡುಕಿ ಹುಡುಕಿ ಸಾಕಾದ ಮೇಲೆ ಈ ಪ್ಲ್ಯಾನ್‌ ಮಾಡಿದ್ದೇನೆ. ಫೋಟೋ ತೆಗೆಸಿ, ಡಿಸೈನ್ ಮಾಡಿಸಿ, ಅದರಲ್ಲೇ ವಾಟ್ಸಪ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಫ್ಲೆಕ್ಸ್ ಹಾಕಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿಬಿಟ್ಟಿದೆ, ನನಗೇ ಅಚ್ಚರಿಯಾಯಿತು. ಅನೇಕ ಮಂದಿ ಬಂದಿದ್ದಾರೆ. ವಿದೇಶದಿಂದಲೂ ಕೆಲವರು ಸಂಪರ್ಕಿಸಿದ್ದಾರೆ. ಆದರೆ ಈ ರೀತಿ ಸಂಪರ್ಕಕ್ಕೆ ಬಂದವರು ಯಾಕೋ ನನಗೆ ಸರಿ ಅನ್ನಿಸಲಿಲ್ಲ. ಜೀವನಪೂರ್ತಿ ಬಾಳಿ ಬದುಕಬೇಕಾದವರನ್ನು ಹುಡುಕುತ್ತಿರೋದಲ್ವಾ. ಆದ್ದರಿಂದ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡುತ್ತಿದ್ದೇನೆ ಎನ್ನುತ್ತಾನೆ ಅನೀಶ್‌.

    ಅತ್ತೆಗೆ ಅಕ್ರಮವಾಗಿ ಹುಟ್ಟಿದ್ದಾನೆ ನನ್ನ ಗಂಡ- ಪೊಲೀಸ್‌ಠಾಣೆ ಮೆಟ್ಟಿಲೇರಿದ ಪತ್ನಿ!

    ಆಂಬ್ಯುಲೆನ್ಸ್‌ಗೆ ದಾರಿ ಮಾಡಲು ಕಾನ್ಸ್‌ಟೆಬಲ್‌ ಪಟ್ಟ ಸಾಹಸಕ್ಕೆ ಅಭಿನಂದನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts