IMD Alert: ವಾಡಿಕೆಗಿಂತ ಮುಂಚಿತವಾಗಿಯೇ ಕರಾವಳಿ ಗಡಿಭಾಗಗಳಿಗೆ ಅಪ್ಪಳಿಸಿರುವ ಮುಂಗಾರು, ಏಕಕಾಲಕ್ಕೆ ಕೇರಳ ಗಡಿಯನ್ನೂ ಪ್ರವೇಶಿಸಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ. ದಕ್ಷಿಣ ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಆಲಪ್ಪುಳದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya
ಜೂನ್ 14-17 ವರುಣಾರ್ಭಟ
ಮುಂದಿನ ದಿನಗಳಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಜೂನ್ 14ರಿಂದ 17 ರವರೆಗೆ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ದೊರೆತಿದೆ ಎಂದು ವರದಿ ಉಲ್ಲೇಖಿಸಿದೆ. ವರುಣಾರ್ಭಟ ಹಿನ್ನೆಲೆ ಕಣ್ಣೂರಿನ ಜಿಲ್ಲಾಧಿಕಾರಿ ಜೂನ್ 14 ಮತ್ತು 15ರಂದು ಅಂಗನವಾಡಿಗಳು, ಶಾಲಾ-ಕಾಲೇಜು ಮತ್ತು ಬೋಧನಾ ಕೇಂದ್ರಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.
ಕಣ್ಣೂರು, ಕಾಸರಗೋಡಿಗೆ ರೆಡ್ ಅಲರ್ಟ್
ಗುರುವಾರ, ಮುಂಬರುವ ದಿನಗಳಲ್ಲಿ, ವಿಶೇಷವಾಗಿ ಉತ್ತರ ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ವಾರದ ಆರಂಭದಿಂದಲೂ ರಾಜ್ಯವು ಭಾರೀ ಮಳೆಯನ್ನು ಅನುಭವಿಸುತ್ತಿದೆ ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬುದನ್ನು ಒತ್ತಿ ಹೇಳಿದೆ. ಕೇರಳದಲ್ಲಿನ ಹವಾಮಾನ ವೈಪರೀತ್ಯ ಕರಾವಳಿ ಕರ್ನಾಟಕದವರೆಗೆ ವಿಸ್ತರಿಸಿದ್ದು, ವ್ಯಾಪಕ ಮಳೆಗೆ ಕಾರಣವಾಗಲಿದೆ,(ಏಜೆನ್ಸೀಸ್).
ಏರ್ ಇಂಡಿಯಾ ವಿಮಾನ ದುರಂತ ಬೆನ್ನಲ್ಲೇ ಹೊಸ ಚರ್ಚೆ ಶುರು! ಪ್ರಯಾಣಿಕರಲ್ಲಿ ಹೆಚ್ಚಿದ ಗೊಂದಲ | Emergency Door