ಓಣಂ ಆಚರಣೆಯ ವೇಳೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಉದ್ಯೋಗಿ ಸಾವು..Onam Celebration

Onam celebrations turn tragic In Kerala Assembly as employee collapses
Published on

Onam Celebration:  ಕೇರಳ ರಾಜ್ಯ ವಿಧಾನಸಭೆಯ ಎಲ್ಲಾ ಉದ್ಯೋಗಿಗಳು ಒಟ್ಟಾಗಿ ಓಣಂ ಆಚರಿಸುತ್ತಿದ್ದಾಗ, ನೃತ್ಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಸ್ಟೇಜ್ ಮೇಲೆ ಕುಸಿದು ಬಿದ್ದು ಸಾವನ್ನೊಪ್ಪಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಜುನೇಶ್ ಅಬ್ದುಲ್ಲಾ (45) ಮೃತ. ಜುನೇಶ್ ಸಹಾಯಕ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ನೃತ್ಯ ಮಾಡುತ್ತಾ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಕೇರಳದಲ್ಲಿ ಓಣಂ ಹಬ್ಬದ ಆಚರಣೆ ನಡೆಯುತ್ತಿದ್ದಾಗ ಒಂದು ದುರಂತ ಘಟನೆ ನಡೆದಿದೆ.

ನಡೆದಿದ್ದೇನು?:

ಎಲ್ಲಾ ಉದ್ಯೋಗಿಗಳು ಒಟ್ಟಾಗಿ ಓಣಂ ಆಚರಿಸುತ್ತಿದ್ದರು. ನೃತ್ಯ ಮಾಡುತ್ತಿದ್ದ ಜುನೇಶ್ ಅಬ್ದುಲ್ಲಾ (45) ಎಂಬ ಉದ್ಯೋಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಜುನೇಶ್ ಕುಸಿದು ಬಿದ್ದಿರುವುದನ್ನು ಗಮನಿಸಿದ ಸಹೋದ್ಯೋಗಿಗಳು ತಕ್ಷಣ ಸ್ಪಂದಿಸಿದರು. ಅವರನ್ನು ಉಳಿಸಲು ಸಿಪಿಆರ್ ಪ್ರಯತ್ನಗಳನ್ನು ಪ್ರಾರಂಭಿಸಲಾಯಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯ ವೈದ್ಯರು ಅವರನ್ನು ಪರೀಕ್ಷಿಸಿ ಜುನೇಶ್ ಈಗಾಗಲೇ ನಿಧನರಾಗಿದ್ದಾರೆ ಎಂದು ದೃಢಪಡಿಸಿದರು.

ಜುನೇಶ್ ಸಾವಿನ ನಂತರ, ಈ ಘಟನೆಯು ನೌಕರರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಮನಹರಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ಇಂತಹ ಹಬ್ಬದ ಆಚರಣೆಗಳು ಮತ್ತು ಕಾರ್ಯಕ್ರಮಗಳ ಸಮಯದಲ್ಲಿ ನೌಕರರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net