ವಿಮಾನಕ್ಕೆ ಹಕ್ಕಿ ಡಿಕ್ಕಿ! ತುರ್ತು ಭೂಸ್ಪರ್ಶ ಮಾಡಿದ ವಿಮಾನ, 272 ಪ್ರಯಾಣಿಕರು ಪ್ರಣಾಪಾಯದಿಂದ ಪಾರು..IndiGo Flight

flight
ಸಾಂದರ್ಭಿಕ ಚಿತ್ರ
Published on: 

IndiGo Flight : ನಾಗ್ಪುರದಿಂದ ಕೋಲ್ಕತ್ತಾಗೆ 272 ಪ್ರಯಾಣಿಕರನ್ನು ಹೊತ್ತ ಸಾಗುತ್ತಿದ್ದ ಇಂಡಿಗೋ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹಕ್ಕಿ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತೂರ್ತು ಭೂಸ್ಪರ್ಶ ಮಾಡಲಾಗಿದೆ.

ವಿಮಾನವು ಹಕ್ಕಿಗೆ ಡಿಕ್ಕಿ ಹೊಡೆದಿದೆ, ನಂತರ ಪೈಲಟ್ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಘಟನೆಯ ಸಮಯದಲ್ಲಿ, ವಿಮಾನದಲ್ಲಿ 272 ಪ್ರಯಾಣಿಕರಿದ್ದರು. ಗಾಳಿಯಲ್ಲಿ ಹಕ್ಕಿಗೆ ಡಿಕ್ಕಿ ಹೊಡೆದ ಕಾರಣ ವಿಮಾನದ ಮುಂಭಾಗವು ಹಾನಿಗೊಳಗಾಯಿತು.

ಅಲುಗಾಡಲು ಪ್ರಾರಂಭಿಸಿತು. ಇದರ ನಂತರ, ಜನರಲ್ಲಿ ಭಯಭೀತತೆ ಉಂಟಾಯಿತು. ಪೈಲಟ್ ಅವರ ಸಕಾಲಿಕ ಕ್ರಮದಿಂದಾಗಿ, ದೊಡ್ಡ ಅಪಘಾತವೊಂದು ತಪ್ಪಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ರೀತಿಯ ನಷ್ಟ ಸಂಭವಿಸಿಲ್ಲ.

ಹಿರಿಯ ವಿಮಾನ ನಿಲ್ದಾಣ ನಿರ್ದೇಶಕ ಅಬಿದ್ ರುಹಿ, ಇಂಡಿಗೋದ ನಾಗ್ಪುರ-ಕೋಲ್ಕತ್ತಾ ವಿಮಾನ ಸಂಖ್ಯೆ 6E812 ಗೆ ಹಕ್ಕಿ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.