ಬೆಂಗಳೂರು: ಇಲ್ಲಿನ ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2024ರಲ್ಲಿ ಬರೊಬ್ಬರಿ 40 ಮಿಲಿಯನ್(40 ದಶಲಕ್ಷ) ಪ್ರಯಾಣಿಕರು ಸಂಚಾರ ಬೆಳೆಸುವ ಮೂಲಕ ಜಗತ್ತಿನ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲೊಂದು ಎಂಬ ಹೆಗ್ಗಳಿಕೆ ಗಳಿಸಿದೆ.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಹೌದು, ವರದಿ ಪ್ರಕಾರ 2023ರಲ್ಲಿ 37.2 ಮಿಲಿಯನ್ ಪ್ರಯಾಣಿಕರು ಕೇಂಪೆಗೌಡ ವಿಮಾನ ನಿಲ್ದಾಣದ ಮೂಲಕ ಸಂಚಾರ ಮಾಡಿದ್ದರು. 2024ರಲ್ಲಿ 40.73 ಪ್ರಯಾಣಿಕ ಏರಿಕೆ ಕಂಡಿದೆ. ಅಲ್ಲದೆ, ಒಂದೇ ದಿನದಲ್ಲಿ ಬರೊಬ್ಬರಿ 1,26,532 ವಿಮಾನ ಹತ್ತಿ ಪ್ರಯಾಣ ಮಾಡುವ ಮೂಲಕ ಅತ್ಯಂತ ಜನಬಿಡ ಪ್ರದೇಶಗಳಲ್ಲೊಂದು ಎಂದು ವರದಿ ಹೇಳಿದೆ. ಅಂದಾಜು ದೈನಂದಿನ ಏರ್ ಟ್ರಾಫಿಕ್ ಚಲನೆ 723ರಷ್ಟಿದ್ದು, ಆ.17ರಂದು ಇದು 782 ರಷ್ಟು ಏರಿಕೆಗೆ ತಲುಪಿತ್ತು ಎಂದು ಸಮೀಕ್ಷೆ ಉಲ್ಲೇಖಿಸಿದೆ.
ಇದನ್ನೂ ಓದಿ: ಜಿಒಸಿಸಿ ಚುನಾವಣೆಯಲ್ಲಿ ಗೋಲ್‌ಮಾಲ್, ಸತ್ತವರ ಹೆಸರಿನಲ್ಲೂ ಮತ ಚಲಾವಣೆ, ಮರು ಮತದಾನಕ್ಕೆ ಒಕ್ಕೋರಲ ಆಗ್ರಹ
ಇನ್ನೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 75 ದೇಶಿಯ ಮತ್ತು 30 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ತನ್ನ ಸಂಪರ್ಕ ವಿಸ್ತಾರಗೊಂಡಿದೆ. ಅಲ್ಲದೆ, ಇದೇ ವರ್ಷದಲ್ಲಿ 15 ಹೊಸ ಮಾರ್ಗಗಳಿಗೆ ಸಂಪರ್ಕಗೊಂಡಿದೆ.
ಹೊಸ ಸಂಪರ್ಕಗಳ ಸೇರ್ಪಡೆ
ಕೆಂಪೇಗೌಡ ವಿಮಾನ ನಿಲ್ದಾಣ ದಿಂದ ಹೊಸ ಸಂಪರ್ಕಗಳಲ್ಲಿ ಅಯೋಧ್ಯೆ, ಐಜ್ವಾಲ್, ನಾಂದೇಡ್ ಮತ್ತು ಲಂಕಾವಿ ಸೇರಿವೆ. ದೇಶೀಯ ಮಾರ್ಗಗಳ ಪೈಕಿ, ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದುಬೈ, ಸಿಂಗಾಪುರ್, ದೋಹಾ, ಅಬುಧಾಬಿ ಮತ್ತು ಲಂಡನ್ ಹೀಥ್ರೂ ಅಂತರರಾಷ್ಟ್ರೀಯ ತಾಣಗಳಾಗಿವೆ ಎಂದು ವರದಿ ಹೇಳಲಾಗಿದೆ.
ಕಾರ್ಗೋದಲ್ಲೂ ಹೊಸ ಮೈಲಿಗಲ್ಲು
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಣೆಯಲ್ಲೂ ಗಮನಾರ್ಹ ಬೆಳವಣಿಗೆ ಕಂಡಿದೆ. ಹೌದು, 2024 ರಲ್ಲಿ 4,96,227 ಮೆಟ್ರಿಕ್ ಟನ್‌ಗಳನ್ನು (MT) ಸಂಸ್ಕರಣೆ ಮಾಡುವ ಮೂಲಕ ಕಾರ್ಗೋ ಕಾರ್ಯಾಚರಣೆಯಲ್ಲಿ ದಾಖಲೆ-ಮುರಿಯುವ ವರ್ಷವನ್ನು ಸಾಧಿಸಿದೆ, ಇದು ಹಿಂದಿನ ವರ್ಷಕ್ಕಿಂತ 17 ಶೇಕಡಾ ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಸರಕುಗಳು ಗಮನಾರ್ಹವಾದ 23 ಪ್ರತಿಶತ ಏರಿಕೆಗೆ ಸಾಕ್ಷಿಯಾಗಿದೆ. (ಏಜೆನ್ಸೀಸ್)
20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ: ಆದ್ರೂ ಯಾಕಿಂಗಾಯ್ತು: ಎಲ್ಲಾ ಪಕ್ಷದ ಶಾಸಕರಿಗೆ CM ಪ್ರಶ್ನೆ