‘ಅಖಂಡ ಭಾರತ’ ಕಾರ್ಯಕ್ರಮದಲ್ಲಿ ಭಾಗವಹಿಸಲು ನೆರೆಯ ರಾಷ್ಟ್ರಗಳಿಗೆ ಆಹ್ವಾನ; ಪಾಕ್​​ ರಿಯಾಕ್ಷನ್​ ಹೀಗಿದೆ | ‘Undivided India’ Event

blank

ನವದೆಹಲಿ: ಭಾರತೀಯ ಹವಾಮಾನ ಇಲಾಖೆಯ 150 ವರ್ಷಗಳ ಸ್ಮರಣಾರ್ಥ ಆಯೋಜಿಸಲಾಗಿರುವ ‘ಅವಿಭಜಿತ ಭಾರತ/ಅಖಂಡ ಭಾರತ’ ವಿಚಾರ ಸಂಕಿರಣದಲ್ಲಿ(‘Undivided India’ Event) ಭಾಗವಹಿಸಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಇತರ ನೆರೆಯ ರಾಷ್ಟ್ರಗಳಿಗೆ ಭಾರತ ಆಹ್ವಾನ ನೀಡಿದೆ. ಇದು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಭಾರತೀಯ ಉಪಖಂಡದ ಹಂಚಿಕೆಯ ಇತಿಹಾಸವನ್ನು ಆಚರಿಸಲು ಸರ್ಕಾರವು ಕೈಗೊಂಡ ಮೊದಲ-ರೀತಿಯ ಉಪಕ್ರಮವಾಗಿದೆ.

blank

ಇದನ್ನು ಓದಿ: ಕೆನಡಾ ಪ್ರಧಾನಿ ಹುದ್ದೆ ರೇಸ್​ನಲ್ಲಿ ಭಾರತೀಯ ಮೂಲದ ಅಭ್ಯರ್ಥಿ; ಚಂದ್ರ ಆರ್ಯ ಕರ್ನಾಟಕದವರು ಎಂಬುದು ಗೊತ್ತೆ? | Chandra Arya

ಯಾವ ದೇಶಗಳಿಗೆ ಆಹ್ವಾನ

ಈ ಆಹ್ವಾನವನ್ನು ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಅಫ್ಘಾನಿಸ್ತಾನ, ಮ್ಯಾನ್ಮಾರ್, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ನೇಪಾಳಕ್ಕೆ ಕಳುಹಿಸಲಾಗಿದೆ. ಇದಲ್ಲದೆ ಮಧ್ಯಪ್ರಾಚ್ಯ, ಮಧ್ಯ ಮತ್ತು ನೈಋತ್ಯ ಏಷ್ಯಾದ ಅಧಿಕಾರಿಗಳಿಗೆ ಸಹ ಆಹ್ವಾನಗಳನ್ನು ಕಳುಹಿಸಲಾಗಿದೆ.
ಪಾಕಿಸ್ತಾನ ತನ್ನ ಭಾಗವಹಿಸುವಿಕೆಯನ್ನು ಖಚಿತಪಡಿಸಿದೆ. ಈ ಬಗ್ಗೆ ಬಾಂಗ್ಲಾದೇಶದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಾಂಗ್ಲಾದೇಶ ಕೂಡ ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡರೆ ಅದೊಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ಪಿಟಿಐ ವರದಿ ಮಾಡಿದೆ.

ಐಎಂಡಿ ಸ್ಥಾಪನೆಯ ಸಮಯದಲ್ಲಿ ಅವಿಭಜಿತ ಭಾರತದ ಭಾಗವಾಗಿದ್ದ ಎಲ್ಲಾ ದೇಶಗಳ ಅಧಿಕಾರಿಗಳು ಸಮಾರಂಭದ ಭಾಗವಾಗಬೇಕೆಂದು ನಾವು ಬಯಸಿದ್ದೇವೆ” ಎಂದು ಐಎಂಡಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಈ ವಿಚಾರ ಸಂಕಿರಣವನ್ನು ಸ್ಮರಣೀಯವಾಗಿಸಲು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿವೆ. ಈ ವಿಶೇಷ ಸಂದರ್ಭದಲ್ಲಿ 150 ರೂಪಾಯಿಗಳ ವಿಶೇಷ ಮತ್ತು ಸೀಮಿತ ಆವೃತ್ತಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ಅದೇ ಸಮಯದಲ್ಲಿ, ಹವಾಮಾನ ಇಲಾಖೆಯ 150 ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣಾರ್ಥವಾಗಿ ಗಣರಾಜ್ಯೋತ್ಸವದಂದು ವಿಶೇಷ ಕೋಷ್ಟಕವನ್ನು ಗೃಹ ಸಚಿವಾಲಯ ಅನುಮೋದಿಸಿದೆ.

ಭಾರತದ ಹವಾಮಾನ ಇಲಾಖೆ ಸ್ಥಾಪನೆ

ಭಾರತದ ಹವಾಮಾನ ಇಲಾಖೆಯನ್ನು ಜನವರಿ 15, 1875 ರಂದು ಸ್ಥಾಪಿಸಲಾಯಿತು. ಆದರೆ ಹವಾಮಾನ ವೀಕ್ಷಣಾಲಯಗಳನ್ನು ಬಹಳ ಹಿಂದೆಯೇ ಸ್ಥಾಪಿಸಲಾಗಿತ್ತು. ಮೊದಲ ಹವಾಮಾನ ವೀಕ್ಷಣಾಲಯಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. ಕೋಲ್ಕತ ವೀಕ್ಷಣಾಲಯವು 1785ರಲ್ಲಿ ಪ್ರಾರಂಭವಾಯಿತು, ಮದ್ರಾಸ್ ವೀಕ್ಷಣಾಲಯವು(ಆಧುನಿಕ ಚೆನ್ನೈ) 1796 ರಲ್ಲಿ ಮತ್ತು ಬಾಂಬೆ ವೀಕ್ಷಣಾಲಯವು(ಆಧುನಿಕ ಮುಂಬೈ) 1826ರಲ್ಲಿ ಪ್ರಾರಂಭವಾಯಿತು.

blank

19ನೇ ಶತಮಾನದ ಆರಂಭದ ವೇಳೆಗೆ, ಈ ಹವಾಮಾನ ಇಲಾಖೆಗಳು ಭಾರತ ಖಂಡದಾದ್ಯಂತ ಹರಡಿತು. ಆದರೆ 1864 ರಲ್ಲಿ ಕೋಲ್ಕತ್ತಾಕ್ಕೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ ಮತ್ತು ನಂತರ 1866 ಮತ್ತು 1871 ರಲ್ಲಿ ಬಂಗಾಳದಲ್ಲಿ ಕ್ಷಾಮದ ನಂತರ IMD 1875 ರಲ್ಲಿ ರೂಪುಗೊಂಡಿತು.(ಏಜೆನ್ಸೀಸ್​​)

ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಣೆ; ಬಾಂಗ್ಲಾದ ಹಸ್ತಾಂತರ ಬೇಡಿಕೆ ಬೆನ್ನಲ್ಲೆ ಭಾರತದ ಮಹತ್ತರ ನಿರ್ಧಾರ | Sheikh Hasina

Share This Article

ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind

ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…

ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್​ಬೈ ಹೇಳಿ | Health Tips

ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…

ಪಿರಿಯಡ್ಸ್​​ ಸಮಯದಲ್ಲಿ ನಿದ್ರಾಹೀನತೆ ಅನುಭವಿಸುವುದು ಏಕೆ?; ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಇದು ಸಾಮಾನ್ಯವಾಗಿ ಮಹಿಳೆಯ ಋತುಚಕ್ರದ ಮೊದಲು ಕಾಣಿಸಿಕೊಳ್ಳುತ್ತದೆ. ಮೂಡ್ ಸ್ವಿಂಗ್ಸ್,…